ಶ್ರೀಲಂಕಾ | ರಾಜೀನಾಮೆ ಪತ್ರಕ್ಕೆ ಸಹಿ ಹಾಕಿದ ಅಧ್ಯಕ್ಷ ಗೊಟಬಯ ರಾಜಪಕ್ಸೆ

Prasthutha|

ಕೊಲಂಬೊ: ಶ್ರೀಲಂಕಾ ಅಧ್ಯಕ್ಷ ಗೊಟಬಯ ರಾಜಪಕ್ಸೆ ಅವರು ಸೋಮವಾರ ತಮ್ಮ ರಾಜೀನಾಮೆ ಪತ್ರಕ್ಕೆ ಸಹಿ ಹಾಕಿದ್ದು, ನಾಳೆ ಗೊಟಬಯ ರಾಜಪಕ್ಸೆ ಅವರ ಅಧ್ಯಕೀಯ ಅವಧಿಯನ್ನು ಕೊನೆಗೊಳಿಸುವ ಸಾರ್ವಜನಿಕ ಘೋಷಣೆಯನ್ನು ಸ್ಪೀಕರ್ ಮಹಿಂದಾ ಯಾಪಾ ಅಬೇವರ್ಧನ್ ಮಾಡಲಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

- Advertisement -

ಜುಲೈ 13 ರ ಬುಧವಾರ ಸಾರ್ವಜನಿಕವಾಗಿ ಘೋಷಣೆ ಮಾಡಲು ಸಂಸತ್ತಿನ ಸ್ಪೀಕರ್’ಗೆ ಹಸ್ತಾಂತರಿಸಲಾಗುವುದು ಎಂದು ತಿಳಿದು ಬಂದಿದೆ.

ಈ ಮಧ್ಯೆ ರಾಷ್ಟ್ರಪತಿಗಳ ರಾಜೀನಾಮೆ ಪತ್ರಕ್ಕೆ ಸಹಿ ಹಾಕಿ ಹಿರಿಯ ಸರ್ಕಾರಿ ಅಧಿಕಾರಿಗೆ ಹಸ್ತಾಂತರಿಸಲಾಗಿದ್ದು, ಅವರು ಅದನ್ನು ಸಂಸತ್ತಿನ ಸ್ಪೀಕರ್’ಗೆ ಹಸ್ತಾಂತರಿಸಲಿದ್ದಾರೆ.

- Advertisement -

ಜುಲೈ 20 ರಂದು ಸಂಸತ್ತಿನಲ್ಲಿ ನೂತನ ಅಧ್ಯಕ್ಷರನ್ನು ಆಯ್ಕೆ ಮಾಡುವವರೆಗೆ ತಾತ್ಕಾಲಿಕ ಅವಧಿಗೆ ಪ್ರಧಾನಿ ರನಿಲ್ ವಿಕ್ರಮ್ ಸಿಂಘೆ ಅವರು ನೂತನ ರಾಷ್ಟ್ರಪತಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಜುಲೈ 20 ರಂದು ನೂತನ ಅಧ್ಯಕ್ಷರನ್ನು ಆಯ್ಕೆ ಮಾಡಲು ಪಕ್ಷದ ನಾಯಕರು ಸಿರ್ಧರಿಸಿದ್ದಾರೆ ಎಂದು ಸ್ಪೀಕರ್ ಮಹಿಂದ ಯಾಪಾ ಅಬೇವರ್ಧನ ತಿಳಿಸಿದ್ದಾರೆ.

ಅಲ್ಲದೆ ಜುಲೈ 19 ರಂದು ಅಧ್ಯಕ್ಷ ಸ್ಥಾನಕ್ಕೆ ನಾಮನಿರ್ದೇಶನಗಳನ್ನು ಕರೆಯಲಾಗುವುದೆಂದು ತಿಳಿದು ಬಂದಿದೆ.

ಶನಿವಾರ ತಮ್ಮ ರಾಜೀನಾಮೆಯನ್ನು ಘೋಷಿಸಿದ ಬೆನ್ನಲ್ಲೇ ಶ್ರೀಲಂಕಾ ಅಧ್ಯಕ್ಷರು ಅಲ್ಲಿಂದ ಓಡಿ ಹೋಗಿದ್ದು, ಬೇರೆ ದೇಶದಲ್ಲಿದ್ದಾರೆ ಎಂದು ತಿಳಿದು ಬಂದಿದೆ.

Join Whatsapp