ಏಷ್ಯಾ ಕಪ್‌| ಪಾಕಿಸ್ತಾನವನ್ನು ಮಣಿಸಿ ಚಾಂಪಿಯನ್‌ ಪಟ್ಟವನ್ನೇರಿದ ಶ್ರೀಲಂಕಾ

Prasthutha|

ದುಬೈ: ಬ್ಯಾಟಿಂಗ್‌ನಲ್ಲಿ ಭಾನುಕ ರಾಜಪಕ್ಸೆ ಮತ್ತು ಬೌಲಿಂಗ್‌ನಲ್ಲಿ ಪ್ರಮೋದ್‌ ಮಧುಸನ್‌ ಮತ್ತು ವನಿಂದು ಹಸರಂಗ ತೋರಿದ ಅಮೋಘ ನಿರ್ವಹಣೆಯ ಬಲದಲ್ಲಿ ಮಿಂಚಿದ ಶ್ರೀಲಂಕಾ, 6ನೇ ಬಾರಿಗೆ ಏಷ್ಯಾದ  ಕ್ರಿಕೆಟ್‌ ಚಾಂಪಿಯನ್‌ ಆಗಿ ಮರೆದಿದ್ದಾರೆ.  

- Advertisement -

ದುಬೈ ಅಂತಾರಾಷ್ಟ್ರೀಯ ಮೈದಾನದಲ್ಲಿ ನಡೆದ ಫೈನಲ್‌ ಪಂದ್ಯದಲ್ಲಿ ಶ್ರೀಲಂಕಾ, ಬಾಬರ್‌ ಅಝಂ ಪಡೆಯನ್ನು 23 ರನ್‌ಗಳ ಅಂತರದಲ್ಲಿ ಬಗ್ಗುಬಡಿಯಿತು. ಆ ಮೂಲಕ 2014ರ ಬಳಿಕ ಪ್ರಮುಖ ಟೂರ್ನಿಯೊಂದರಲ್ಲಿ ದ್ವೀಪರಾಷ್ಟ್ರ ಚಾಂಪಿಯನ್‌ ಪಟ್ಟವನ್ನು ಅಲಂಕರಿಸಿದೆ.

ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ನಡೆಸಿದ ಲಂಕಾ, ಭನುಕ ರಾಜಪಕ್ಷೆ ಗಳಿಸಿದ ಅರ್ಧಶತಕದ ನೆರವಿನಿಂದ 6 ವಿಕೆಟ್‌ ನಷ್ಟದಲ್ಲಿ 170 ರನ್‌ಗಳಿಸಿತ್ತು. ಆದರೆ ಕಠಿಣ ಗುರಿಯನ್ನು ಬೆನ್ನಟ್ಟವಲ್ಲಿ ವಿಫಲರಾದ ಪಾಕಿಸ್ತಾನ 140 ರನ್‌ ಗಳಿಸುವಷ್ಟರಲ್ಲಿ ಆಲೌಟ್‌ ಆಯಿತು.

- Advertisement -

Join Whatsapp