ಕೊಲಂಬೋ: ವಿರೋಧ ಪಕ್ಷಗಳ ಒತ್ತಾಯಕ್ಕೆ ಮಣಿದು ಕೊನೆಗೂ ತಲೆಬಾಗಿರುವ ಶ್ರೀಲಂಕಾದ ರಾಷ್ಟ್ರಪತಿ ಗೋಟಬಯ ರಾಜಪಕ್ಸೆ , ಪ್ರಧಾನಿ ಹುದ್ದೆಯಿಂದ ತಮ್ಮ ಹಿರಿಯ ಸಹೋದರ ಮಹಿಂದಾ ರಾಜಪಕ್ಸೆಯವರನ್ನು ಪದಚ್ಯುತಿಗೊಳಿಸಲು ಒಪ್ಪಿಗೆ ನೀಡಿದ್ದಾರೆ. ನೂತನ ಪ್ರಧಾನಿ ನೇಮಕಕ್ಕೆ ಸಮಿತಿ ರಚಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.
ಶ್ರೀಲಂಕಾದಲ್ಲಿ ಸರ್ವಪಕ್ಷಗಳ ಹಂಗಾಮಿ ಸರಕಾರವನ್ನು ಸ್ಥಾಪಿಸುವ ತಮ್ಮ ಇತ್ತೀಚಿನ ಪ್ರಸ್ತಾವನೆಯನ್ನು ರಾಷ್ಟ್ರಪತಿ ಗೋಟಬಯ ಅವರು ಪುನಃ ವಿಪಕ್ಷಗಳ ಮುಂದೆ ಮಂಡಿಸಿದ್ದು, ಆ ಪಕ್ಷದಲ್ಲಿ ಮಹಿಂದಾ ರಾಜಪಕ್ಸೆ ಅವರ ಪಾತ್ರವಿರುವುದಿಲ್ಲ ಎಂದೂ ಸ್ಪಷ್ಟಪಡಿಸಿದ್ದಾರೆ.