ಶ್ರೀಲಂಕಾ | 40 ಸಾವಿರ ಮಕ್ಕಳಿಗೆ ಅಪೌಷ್ಟಿಕತೆಯ ಭೀತಿ..!

Prasthutha|

ಕೊಲಂಬೊ: ಶ್ರೀಲಂಕಾದಲ್ಲಿ ಉಂಟಾದ ತೀವ್ರ ರೀತಿಯ ಆರ್ಥಿಕ ಬಿಕ್ಕಟ್ಟು ಅಲ್ಲಿನ ಮಕ್ಕಳ ಮೇಲೆ ಪರಿಣಾಮ ಬೀರಿದೆ. ಆರ್ಥಿಕ ಬಿಕ್ಕಟ್ಟಿನ ಮಧ್ಯೆ ಮುಂಬರುವ ತಿಂಗಳಲ್ಲಿ ಸುಮಾರು 40 ಸಾವಿರ ಮಕ್ಕಳು ಅಪೌಷ್ಟಿಕತೆಯಿಂದ ಬಳಲುವ ಸಾಧ್ಯತೆಯಿದೆ ಎಂದು ಶ್ರೀಲಂಕಾದ ಆರೋಗ್ಯ ಸಚಿವ ಕೆಹೆಲಿಯಾ ರಂಬುಕ್ವೆಲ್ಲಾ ತಿಳಿಸಿದ್ದಾರೆ.

- Advertisement -

ಪ್ರಸ್ತುತ 21 ಸಾವಿರ ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದು, ಮುಂಬರುವ ತಿಂಗಳಲ್ಲಿ ಈ ಸಂಖ್ಯೆ 40 ಸಾವಿರಕ್ಕೇರುವ ಕುರಿತು ಇತ್ತೀಚಿನ ಸಮೀಕ್ಷೆಯಲ್ಲಿ ಅಂದಾಜಿಸಲಾಗಿದೆ ಎಂದು ಅವರು ತಿಳಿಸಿದರು.

ಈ ಮಧ್ಯೆ ಅಪೌಷ್ಟಿಕತೆಯ ಬಿಕ್ಕಟ್ಟನ್ನು ಬಗೆಹರಿಸುವ ನಿಟ್ಟಿನಲ್ಲಿ ಈ ಮಕ್ಕಳಿಗೆ ಆಹಾರವನ್ನು ನೀಡಲು ದೇಶದೆಲ್ಲೆಡೆ ಡಿಸೆಂಬರ್ ನಿಂದ ಪೋಷಕರ ಆರೈಕೆ ಕಾರ್ಯಕ್ರಮವನ್ನು ಪ್ರಾರಂಭಿಸಲಿದೆ ಎಂದು ಅವರು ತಿಳಿಸಿದರು.

- Advertisement -

ಸಾವಿರಾರು ಮಕ್ಕಳಿಗೆ ಉಚಿತ ಆಹಾರ ನೀಡಲು ದೇಶದಲ್ಲಿ ಬಂಡವಾಳದ ಕೊರತೆ ಇರುವುದರಿಂದ ಈ ಕಾರ್ಯಕ್ರಮಕ್ಕೆ ನಿಧಿ ಸಂಗ್ರಹಿಸಲು ಸರ್ಕಾರ ಮುಂದಾಗಿದೆ ಎಂದು ತಿಳಿದುಬಂದಿದೆ.

ಖಾಸಗಿ ವಲಯದಿಂದ ಪಡೆದ 1 ಶತಕೋಟಿ ರೂಪಾಯಿಯಲ್ಲಿ 500 ಮಿಲಿಯನ್ ಹಣವನ್ನು ಮಕ್ಕಳ ಪೌಷ್ಟಿಕಾಂಶ ಕಾರ್ಯಕ್ರಮಕ್ಕೆ ಮೀಸಲಿರಿಸಿದೆ ಎಂದು ರಂಬುಕ್ವೆಲ್ಲಾ ತಿಳಿಸಿದರು.

ಈ ಮಧ್ಯೆ ಆಹಾರ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಶ್ರೀಲಂಕಾವು ಮುಂದಿನ 6 ತಿಂಗಳ ಅವಧಿಗೆ ಬಡತನ ಪೀಡಿತ 66 ಸಾವಿರ ಕುಟುಂಬಗಳಿಗೆ ಮಾಸಿಕ 15 ಸಾವಿರ ರೂಪಾಯಿ ಭತ್ಯೆಯನ್ನು ನೀಡುತ್ತದೆ ಎಂದು ರಾಷ್ಟ್ರೀಯ ಆಹಾರ ಭದ್ರತಾ ಕಾರ್ಯಕ್ರಮದ ಮುಖ್ಯಸ್ಥ ಸುರೇನ್ ಬಟಗೋಡ ತಿಳಿಸಿದರು.



Join Whatsapp