ಬೆಳ್ಳಿ ಪದಕ ಪಡೆದ ಭಾರತೀಯ ಕ್ರೀಡಾ ಪ್ರಾಧಿಕಾರದ ಐವರು ವಿದ್ಯಾರ್ಥಿನಿಯರಿಗೆ ಸನ್ಮಾನ

Prasthutha|

ಮಡಿಕೇರಿ: ಭೋಪಾಲ್ನಲ್ಲಿ ಇತ್ತೀಚೆಗೆ ನಡೆದ ಭಾರತೀಯ 12 ನೇ ಹಾಕಿ ಹಿರಿಯ ಬಾಲಕಿಯರ ವಿಭಾಗದಲ್ಲಿ ಪಾಲ್ಗೊಂಡು ಬೆಳ್ಳಿ ಪದಕ ಪಡೆದಿರುವ ನಗರದ ಭಾರತೀಯ ಕ್ರೀಡಾ ಪ್ರಾಧಿಕಾರದ ಐವರು ವಿದ್ಯಾರ್ಥಿನಿಯರಿಗೆ ಜಿಲ್ಲಾಡಳಿತ ಹಾಗೂ ಭಾರತೀಯ ಕ್ರೀಡಾ ಪ್ರಾಧಿಕಾರ ಸನ್ಮಾನಿಸಿತು.

- Advertisement -

ಬೆಳ್ಳಿ ಪದಕ ಪಡೆದ ಎಸ್.ಪಿ.ಲಿಖಿತ, ಲೀಲಾವತಿ ಬಿ. ಕೊಪ್ಪದ್, ಎಚ್.ಜಿ.ಧನುಶ್ರೀ, ಶ್ರಯಾ ಕಾವೇರಮ್ಮ ಬಡುವಂಡ, ದೀಪ್ತಿ ಕರವಟ್ಟಿರ ಅವರಿಗೆ ಶಾಲೂ, ಸ್ಮರಣಿಕೆ ನೀಡಿ ಆತ್ಮೀಯವಾಗಿ ಅಭಿನಂದಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು ಭಾರತೀಯ ಹಾಕಿ ಹಿರಿಯ ಬಾಲಕಿಯರ ವಿಭಾಗದಲ್ಲಿ ಬೆಳ್ಳಿ ಪದಕ ಪಡೆದಿರುವುದು ಶ್ಲಾಘನೀಯ. ತಾವು ಇತರರಿಗೆ ಆದರ್ಶವಾಗಿದ್ದು, ಅದನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯಬೇಕು ಎಂದು ಅವರು ಸಲಹೆ ನೀಡಿದರು.

- Advertisement -

ಹಾಕಿ ಕ್ರೀಡಾಕೂಟದಲ್ಲಿ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಪಾಲ್ಗೊಳ್ಳುವಂತಾಗಬೇಕು. ಜಿಲ್ಲಾಡಳಿತ ವತಿಯಿಂದ ಭಾರತೀಯ ಕ್ರೀಡಾ ಪ್ರಾಧಿಕಾರ ಸಂಸ್ಥೆಯನ್ನು ಮತ್ತಷ್ಟು ಅತ್ಯುನ್ನತ್ತ ಸ್ಥಾನಕ್ಕೆ ಕೊಂಡೊಯ್ಯಲು ಎಲ್ಲಾ ರೀತಿಯ ಸಹಕಾರ ನೀಡಲಾಗುವುದು ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎ.ಅಯ್ಯಪ್ಪ ಅವರು ಮಾತನಾಡಿ ತಮ್ಮ ಸಾಧನೆಗೆ ಅಭಿನಂದನೆ. ಇನ್ನೂ ಹೆಚ್ಚಿನ ಸಾಧನೆ ಮಾಡುವಂತಾಗಬೇಕು. ನಿರಂತರ ಅಭ್ಯಾಸ ಮಾಡಿದ್ದಲ್ಲಿ ಯಶಸ್ಸುಗಳಿಸಲು ಸಾಧ್ಯ. ಯಾವುದೇ ಕ್ಷೇತ್ರದಲ್ಲಿ ಆಸಕ್ತಿ ಇದ್ದಲ್ಲಿ ಜಯ ಗಳಿಸಬಹುದು, ಆ ನಿಟ್ಟಿನಲ್ಲಿ ಮುನ್ನಡೆಯಬೇಕು ಎಂದು ಅವರು ಹೇಳಿದರು.

ಜಿ.ಪಂ.ಸಿಇಒ ಭಂವರ್ ಸಿಂಗ್ ಮೀನಾ ಅವರು ಮಾತನಾಡಿ ಕೊಡಗು ಜಿಲ್ಲೆಯಲ್ಲಿ ಹಾಕಿ ಕ್ರೀಡೆಗೆ ಹೆಚ್ಚಿನ ಪ್ರೋತ್ಸಾಹ ಇದೆ. ಆ ದಿಸೆಯಲ್ಲಿ ಉತ್ಸಾಹದಿಂದ ಪಾಲ್ಗೊಳ್ಳಬೇಕು ಎಂದರು. ಮಡಿಕೇರಿ, ಪೊನ್ನಂಪೇಟೆ ಹಾಗೂ ಕೂಡಿಗೆಯಲ್ಲಿ ಹಾಕಿ ಟರ್ಪ್ ಮೈದಾನವಿದ್ದು, ಹಾಕಿ ಕ್ರೀಡೆಯಲ್ಲಿ ಮತ್ತಷ್ಟು ತೊಡಗಿಸಿಕೊಂಡು ಒಲಂಪಿಕ್, ಕಾಮನ್ ವೆಲ್ತ್ ಗೇಮ್ ಕ್ರೀಡಾಕೂಟದಲ್ಲಿ ಪಾಲ್ಗೊಂಡು ಯಶಸ್ಸುಗಳಿಸಬೇಕು ಎಂದರು.

ಭಾರತೀಯ ಕ್ರೀಡಾ ಪ್ರಾಧಿಕಾರದ ವಿದ್ಯಾರ್ಥಿ ನಿಲಯದ ಮೇಲ್ವಿಚಾರಕರಾದ ಮಿನಿ ಉನ್ನಿರಾಜ್ ಅವರು ಸ್ವಾಗತಿಸಿದರು, ಭಾರತೀಯ ಕ್ರೀಡಾ ಪ್ರಾಧಿಕಾರದ ಸಿ.ಯು.ರಾಣಿ ಅವರು ವರದಿ ಓದಿದರು, ಪಿ.ಎಂ.ಬೊಳ್ಳಮ್ಮ ನಿರೂಪಿಸಿದರು, ಹಾಕಿ ಕ್ರೀಡಾ ತರಬೇತಿದಾರರಾದ ಕೋಮಲ ಅವರು ವಂದಿಸಿದರು.



Join Whatsapp