ಎಲ್ಲ ಮಾದರಿಯ ಕ್ರಿಕೆಟ್ ಗೆ ವಿದಾಯ ಘೋಷಿಸಿದ ಹರ್ಭಜನ್ ಸಿಂಗ್

Prasthutha|


ಹೊಸದಿಲ್ಲಿ: ಕ್ರಿಕೆಟ್ ಅಂಗಳದ ಟರ್ಬೊನೇಟರ್ ಎಂದೇ ಜನಪ್ರಿಯರಾಗಿರುವ ಹರ್ಭಜನ್ ಸಿಂಗ್ 23 ವರ್ಷಗಳ ಕ್ರಿಕೆಟ್ ಪಯಣಕ್ಕೆ ವಿದಾಯ ಘೋಷಿಸಿದ್ದಾರೆ.

- Advertisement -


ಅವರು 1998ನೇ ಇಸವಿಯಲ್ಲಿ ಟೆಸ್ಟ್ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದ್ದರು.
ಭಜ್ಜಿ ಭಾರತದ ಪರ 103 ಟೆಸ್ಟ್, 236 ODI ಮತ್ತು 28 T20 ಪಂದ್ಯಗಳನ್ನು ಆಡಿದ್ದಾರೆ. ಇದರಲ್ಲಿ 417 ಟೆಸ್ಟ್ ವಿಕೆಟ್‌, 269 ಏಕದಿನ ವಿಕೆಟ್‌ಗಳನ್ನು ಪಡೆದಿದ್ದಾರೆ.

ಮುಂದಿನ ಸೀಸನ್ ಐಪಿಎಲ್ ನಲ್ಲಿ 41 ವರ್ಷದ ಹರ್ಭಜನ್ ಸಿಂಗ್ ಆಟಗಾರನಾಗಿ ಕಾಣಿಸಿಕೊಳ್ಳುವುದಿಲ್ಲ. ಬದಲಾಗಿ ತಂಡವೊಂದರ ಮೆಂಟರ್ ಆಗಿ ತಂಡದಲ್ಲಿ ಇರಲಿದ್ದಾರೆ ಎಂದು ತಿಳಿದು ಬಂದಿದೆ. ಕಳೆದ ಸೀಸನ್ ಐಪಿಎಲ್ ನಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಭಾಗವಾಗಿದ್ದ ಹರ್ಭಜನ್ ಸಿಂಗ್ ಮುಂದಿನ ಸೀಸನ್ ನಲ್ಲಿ ಯಾವ ತಂಡದ ಮಾರ್ಗದರ್ಶಕರಾಗಲಿದ್ದಾರೆ ಎಂಬುದೇ ಇದೀಗ ಕುತೂಹಲಕ್ಕೆ ಕಾರಣವಾಗಿದೆ.

Join Whatsapp