ಹಿಂದೂ ಧರ್ಮಕ್ಕೆ ಅಪಾಯವಿದೆ ಎಂಬ ಮಾತು ಕಾಲ್ಪನಿಕ: ಕೇಂದ್ರ ಗೃಹ ಸಚಿವಾಲಯ

Prasthutha|

ನವದೆಹಲಿ: ಹಿಂದೂ ಧರ್ಮಕ್ಕೆ ಅಪಾಯವಿದೆ ಎಂಬುದು ಕೇವಲ ಕಾಲ್ಪನಿಕ ಎಂದು ಕೇಂದ್ರ ಸರ್ಕಾರ ಹೇಳಿದೆ.
ಹಿಂದೂ ಧರ್ಮಕ್ಕೆ ಅಪಾಯವಿದೆ ಎಂಬ ಆಪಾದನೆ “ಕಾಲ್ಪನಿಕ”. ಆಪಾದನೆಯನ್ನು ಪುಷ್ಟೀಕರಿಸುವ ಯಾವುದೇ ಸಾಕ್ಷಿಗಳಿಲ್ಲ ಎಂದು ಗೃಹ ಸಚಿವಾಲಯ ಹೇಳಿದೆ.

- Advertisement -


ನಾಗ್ಪುರದ ಕಾರ್ಯಕರ್ತ ಮೊಹ್ನೀಶ್ ಜಬಲ್ಪುರೆ ಅವರು ಕಳೆದ ಆಗಸ್ಟ್ 31 ರಂದು ಸಲ್ಲಿಸಿದ ಆರ್ ಟಿಐ ಅರ್ಜಿಗೆ ಸಚಿವಾಲಯ ಈ ಉತ್ತರ ನೀಡಿದೆ. ಗೃಹ ಸಚಿವಾಲಯ ದೇಶದಲ್ಲಿ ಹಿಂದೂ ಧರ್ಮಕ್ಕೆ ಬೆದರಿಕೆಯಿದೆಯೆಂಬುದಕ್ಕೆ ಪುರಾವೆಗಳನ್ನು ತೋರಿಸಿ ಎಂದು ಕೇಳಿದ್ದರು.


ಅದಕ್ಕೆ ಗೃಹ ಸಚಿವಾಲಯ ಆಂತರಿಕ ಭದ್ರತೆ ಅಧಿಕಾರಿ ರಾಣಾ, ಜಬಲ್ಪುರೆಯ “ಕಾಲ್ಪನಿಕ” ಪ್ರಶ್ನೆಗಳಿಗೆ ಉತ್ತರಿಸಲು ಸಾಧ್ಯವಿಲ್ಲ, ಇದನ್ನು ಶೂನ್ಯ ಮತ್ತು ಅನೂರ್ಜಿತ ಎಂದು ಪರಿಗಣಿಸಲಾಗಿದೆ ಎಂದಿದ್ದಾರೆ.
ಇತ್ತೀಚೆಗೆ ಮಾಹಿತಿ ಹಕ್ಕು ಕಾಯ್ದೆಯಡಿ ಕೇಳಲಾದ ಪ್ರಶ್ನೆಗೆ ಕೇಂದ್ರ ಸರ್ಕಾರ ಪ್ರತಿಕ್ರಿಯೆ ನೀಡಿದ್ದು, ಹಿಂದೂ ಧರ್ಮಕ್ಕೆ ಬೆದರಿಕೆಯಿದೆ ಎಂದು ಕಳವಳ ವ್ಯಕ್ತಪಡಿಸುವ ಯಾವುದೇ ದಾಖಲೆಗಳಾಗಲಿ, ಸಾಕ್ಷಿಗಳಾಗಲಿ ಸಿಕ್ಕಿಲ್ಲ ಎಂದು ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯ ಸ್ಪಷ್ಟನೆ ನೀಡಿದೆ.

- Advertisement -

Join Whatsapp