ವಿಕಲಾಂಗ ಮುಸ್ಲಿಮ್ ಬಾಲಕನ ಜೊತೆ ಲಂಚಕ್ಕೆ ಬೇಡಿಕೆ ಇಟ್ಟು ಮಾರಣಾಂತಿಕವಾಗಿ ಥಳಿಸಿದ ಉತ್ತರ ಪ್ರದೇಶದ ಪೊಲೀಸರು !

Prasthutha|

►ವೀಡಿಯೋ + ಸುದ್ದಿ

- Advertisement -

ಬರೇಲಿ : ತನ್ನ ಬಲಗೈ ಕಳೆದುಕೊಂಡಿದ್ದ ವಿಕಲಾಂಗ ಮುಸ್ಲಿಮ್ ಬಾಲಕನ ಮೇಲೆ ಉತ್ತರ ಪ್ರದೇಶದ ಪೊಲೀಸರು ಮಾರಣಾಂತಿಕವಾಗಿ ಥಳಿಸಿದ್ದಾರೆ.  ಬರೇಲಿಯಲ್ಲಿ ಈ ಘಟನೆ ನಡೆದಿದ್ದು, ಇದರ ಸಿಸಿಟಿವಿ ವೀಡಿಯೋ ವೈರಲ್ ಆಗಿದೆ. ಸಿಸಿಟಿವಿ ದೃಶ್ಯದಲ್ಲಿ ವಿಕಲಾಂಗ ಬಾಲಕನನ್ನು ಸಮೀಪಿಸಿದ ಪೊಲೀಸರು ಲಾಠಿಯಿಂದ ತೀವ್ರವಾಗಿ ಹಲ್ಲೆ ನಡೆಸುತ್ತಾರೆ. ಆ ಬಳಿಕ ಅಟ್ಟಾಡಿಸಿಕೊಂಡು ಆ ಬಾಲಕನ ಮೇಲೆ ಹಲ್ಲೆ ನಡೆಸುತ್ತಾರೆ.

ಉಮ್ಮಳಿಸಿ ಬರುತ್ತಿರುವ ದುಃಖವನ್ನು ತಡೆಯುತ್ತಲೇ ತನ್ನ ಮೇಲಾಗಿರುವ ಹಲ್ಲೆಯ ಕುರಿತು ಮಾತನಾಡಿದ ಬಾಲಕ,  “ನನ್ನ ಬಳಿ ಬಂದ ಪೊಲೀಸರಿಬ್ಬರು ನೀನು ಮೀನು ಮಾರುತ್ತೀಯಾ ಎಂದು ಕೇಳಿದರು. ಅದಕ್ಕೆ ನಾನು ಹೌದೆಂದು ಉತ್ತರಿಸಿದೆ. ನೀನು ಅಕ್ರಮವಾಗಿ ಮಾರುತ್ತಿದ್ದೀಯಾ ಎಂದು ಅವರು ನನ್ನ ಕೈ ಮತ್ತು ಕಾಲಿನ ಭಾಗಕ್ಕೆ ತೀವ್ರವಾಗಿ ಥಳಿಸಿದರು. ನಾನು ಮೀನು ಮಾರಿ ಬಂದ ಹಣದ ಅರ್ಧ ಭಾಗವನ್ನು ಅವರಿಗೆ ಲಂಚವಾಗಿ ನೀಡಬೇಕೆಂದು ಅವರು   ಕೇಳಿದ್ದಾರೆ. ಅದಕ್ಕೆ ನಾನು ನಿರಾಕರಿಸಿದಾಗ ಅವರು ನನ್ನ ಮೇಲೆ ಹಲ್ಲೆ ನಡೆಸಿದರು ಎಂದು ಬಾಲಕ ಘಟನೆಯ ಬಗ್ಗೆ ವಿವರಿಸಿದ್ದಾನೆ. ಇದೀಗ ಬಾಲಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

- Advertisement -

ಪೊಲೀಸರ ಅಮಾನತು, ಇಲಾಖಾ ತನಿಖೆಗೆ ಸೂಚನೆ : ಬರೇಲಿ ಎಸ್ಪಿ ಹೇಳಿಕೆ

ಇನ್ನು ಈ ಘಟನೆಯ ಬಗ್ಗೆ ಪ್ರತಿಕ್ರಿಯಿಸಿರುವ ಬರೇಲಿ ಎಸ್ಪಿಯವರು, ವೈರಲಾಗಿರುವ ವೀಡಿಯೋದಲ್ಲಿರುವ ಇಬ್ಬರು ಪೊಲೀಸರನ್ನು ತಕ್ಷಣವೇ ಅಮಾನತು ಮಾಡಲಾಗಿದೆ. ಮಾತ್ರವಲ್ಲ ಅವರ ವಿರುದ್ಧ ಇಲಾಖಾ ಮಟ್ಟದ  ತನಿಖೆಗೆ ಆದೇಶ ನೀಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

Join Whatsapp