ಗಾಂಧಿ ಸ್ಮರಣಾರ್ಥ ಹೊರತರುತ್ತಿರುವ ಮಾಸ ಪತ್ರಿಕೆಯಲ್ಲಿ ಸಾವರ್ಕರ್ ಕುರಿತು ವಿಶೇಷ ಸಂಚಿಕೆ: ವ್ಯಾಪಕ ಆಕ್ರೋಶ

Prasthutha|

►ಸಾವರ್ಕರ್  ಸ್ಥಾನ ಗಾಂಧಿಗಿಂತ ಕಡಿಮೆಯಿಲ್ಲ ಎಂದ ‘ಅಂತಿಮ್  ಜನ್’ ಪತ್ರಿಕೆ

- Advertisement -

ನವದೆಹಲಿ: ಮಹಾತ್ಮ ಗಾಂಧಿ ಸ್ಮರಣಾರ್ಥ ನ್ಯಾಷನಲ್  ಮೆಮೋರಿಯಂ ಆ್ಯಂಡ್  ಮ್ಯೂಸಿಯಂ, ಹೊರತರುತ್ತಿರುವ ‘ಅಂತಿಮ್  ಜನ್ ಮಾಸಪತ್ರಿಕೆಯಲ್ಲಿ ಹಿಂದುತ್ವವಾದಿ ವಿನಾಯಕ ದಾಮೋದರ ಸಾವರ್ಕರ್ ಅವರಿಗೆ ಮೀಸಲಿಟ್ಟು ವಿಶೇಷ ಸಂಚಿಕೆಯನ್ನು ಬಿಡುಗಡೆ ಮಾಡಲು ನಿರ್ಧರಿಸಿದ್ದು, ಇದಕ್ಕೆ ಗಾಂಧಿವಾದಿಗಳು ಮತ್ತು ವಿರೋಧ ಪಕ್ಷಗಳ ನಾಯಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

 ಸಾವರ್ಕರ್  ಅವರನ್ನು ‘ಮಹಾನ್  ದೇಶಭಕ್ತ’ ಎಂದು ಶ್ಲಾಘಿಸಿದ್ದು, ‘ಇತಿಹಾಸದಲ್ಲಿ ಸಾವರ್ಕರ್  ಅವರ ಸ್ಥಾನ ಗಾಂಧಿ ಅವರಿಗಿಂತ ಕಡಿಮೆಯಿಲ್ಲ’ ಎಂದು ಉಲ್ಲೇಖಿಸಲಾಗಿದೆ.

- Advertisement -

ಜೂನ್  ತಿಂಗಳ ಪ್ರತಿಯನ್ನು ಗಾಂಧಿ ಸ್ಮೃತಿ ಮತ್ತು ದರ್ಶನ ಸಮಿತಿ (ಜಿಎಸ್ ಡಿಎಸ್ )ಹಿಂದಿ ಭಾಷೆಯಲ್ಲಿ ಹೊರತರುತ್ತಿದೆ. ಈ ಪ್ರತಿಷ್ಠಿತ ಸಂಸ್ಥೆಯು ಸಂಸ್ಕೃತಿ ಸಚಿವಾಲಯದಡಿ ಕಾರ್ಯನಿರ್ವಹಿಸುತ್ತಿದೆ. ಪ್ರಧಾನಿ ಇದರ ಅಧ್ಯಕ್ಷರಾಗಿದ್ದಾರೆ. ಈ ಸಂಸ್ಥೆಯು ತೀಸ್  ಜನವರಿ ಮಾರ್ಗ್  (ಅಲ್ಬುಕರ್ಕ್  ರಸ್ತೆ)ನಲ್ಲಿರುವ ಬಿರ್ಲಾ ಹೌಸ್ ನಲ್ಲಿದೆ. ಇದು 1948ರ ಜನವರಿ 30ರಂದು ಮಹಾತ್ಮ ಗಾಂಧಿ ಅವರನ್ನು ನಾಥೂರಾಮ್  ಗೋಡ್ಸೆ ಹತ್ಯೆ ಮಾಡಿದ ಸ್ಥಳವಾಗಿದೆ.

ಈ ಬಗ್ಗೆ ಗಾಂಧಿ ಸ್ಮೃತಿ ಮತ್ತು ದರ್ಶನ ಸಮಿತಿಯ ಉಪಾಧ್ಯಕ್ಷ ವಿಜಯ್ ಗೋಯಲ್ ಅವರೊಂದಿಗೆ ಪ್ರಶ್ನಿಸಿದಾಗ, ಮೇ 28 ರಂದು ಸಾವರ್ಕರ್ ಅವರ ಜನ್ಮದಿನವಾದ್ದರಿಂದ ಸಂಚಿಕೆಯನ್ನು ಸಾವರ್ಕರ್ ಅವರಿಗೆ ಸಮರ್ಪಿಸಲಾಗಿದೆ.  ಸಾವರ್ಕರ್ ಒಬ್ಬ ಮಹಾನ್ ವ್ಯಕ್ತಿ ಎಂದು ಪ್ರತಿಕ್ರಿಯಿಸಿದ್ದಾರೆ.

ಜೈಲಿನಲ್ಲಿದ್ದಾಗ ಬ್ರಿಟಿಷರಿಗೆ ಸಾವರ್ಕರ್ ಸಲ್ಲಿಸಿದ್ದ ಕ್ಷಮಾದಾನ ಅರ್ಜಿಗಳ ವಿವಾದದ ಬಗ್ಗೆ ಕೇಳಿದಾಗ, ಗೋಯೆಲ್ ,  ಯಾವಾಗಲೂ “ತ್ಯಾಗ ಮಾಡದವರು” ಈ ಪ್ರಶ್ನೆಗಳನ್ನು ಎತ್ತುತ್ತಾರೆ ಎಂದು ಉಡಾಫೆ ಉತ್ತರ ನೀಡಿದ್ದಾರೆ.

ಮಹಾತ್ಮಾ ಗಾಂಧಿ ಅವರ ಮರಿಮೊಮ್ಮಗ ತುಷಾರ್ ಗಾಂಧಿ, ಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌದರಿ, ಬರಹಗಾರ ಧೀರೇಂದ್ರ ಕೆ ಜಾ ಮತ್ತಿತರರು ಸರ್ಕಾರದ ಈ ನಿರ್ಧಾರವನ್ನು ತೀವ್ರವಾಗಿ ಖಂಡಿಸಿದ್ದಾರೆ.



Join Whatsapp