ನವದೆಹಲಿ,ಆ.3; ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಆಗಸ್ಟ್ 15ರಂದು ದೆಹಲಿಯ ಕೆಂಪುಕೋಟೆಯಲ್ಲಿ ನಡೆಯಲಿರುವ ಸಮಾರಂಭಕ್ಕೆ ಒಲಿಂಪಿಕ್ಸ್ ನಲ್ಲಿ ದೇಶವನ್ನು ಪ್ರತಿನಿಧಿಸಿರುವವರನ್ನು ವಿಶೇಷ ಅತಿಥಿಗಳನ್ನಾಗಿ ಆಹ್ವಾನಿಸಲು ಸರ್ಕಾರ ಮುಂದಾಗಿದೆ.
ಒಲಿಂಪಿಕ್ಸ್ ತಂಡವನ್ನು ಸಂವಾದಕ್ಕಾಗಿ ತಮ್ಮ ನಿವಾಸಕ್ಕೂ ಪ್ರಧಾನಿಯವರು ಆಹ್ವಾನಿಸಲಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
120 ಅಥ್ಲೀಟ್ ಗಳೂ ಸೇರಿದಂತೆ ಒಟ್ಟು 228 ಮಂದಿ ಭಾರತದಿಂದ ಒಲಿಂಪಿಕ್ಸ್ ನಲ್ಲಿ ಭಾಗವಹಿಸಿದ್ದಾರೆ.
ಒಲಿಂಪಿಕ್ಸ್ ಗೆ ತೆರಳುವ ಮುನ್ನ ಅಥ್ಲೀಟ್ ಗಳ ಬಳಿ ಸಂವಾದ ನಡೆಸಿದ್ದರು.
“ಸೋಲು-ಗೆಲುವು ಜೀವನದ ಒಂದು ಭಾಗ. ನಮ್ಮ ಪುರುಷರ ಹಾಕಿ ತಂಡವು ಅತ್ಯುತ್ತಮವಾದ ಪ್ರದರ್ಶನ ನೀಡಿದೆ. ಮುಂದಿನ ಪಂದ್ಯ ಹಾಗೂ ಅವರ ಭವಿಷ್ಯದ ಪ್ರಯತ್ನಗಳಿಗೆ ಶುಭ ಹಾರೈಸುತ್ತೇನೆ ” ಎಂದು ಟೋಕಿಯೊ ಒಲಿಂಪಿಕ್ಸ್ನ ಪುರುಷರ ಹಾಕಿ ಸೆಮಿಫೈನಲ್ ನಲ್ಲಿ ಸೋಲಿನ ಬಳಿಕ ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದರು.