ಆಸ್ಪತ್ರೆಗಳಿಂದ ಬಿಡುಗಡೆ ಹೊಂದುವ ರೋಗಿಗಳಿಗಾಗಿ ವಿಶೇಷ ಮಾರ್ಗಸೂಚಿ: ಡಾ.ಕೆ.ಸುಧಾಕರ್

Prasthutha|

ಬೆಂಗಳೂರು: ರಾಜ್ಯದಲ್ಲಿ ಒಮಿಕ್ರಾನ್ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆ ಹೊಂದುವ ರೋಗಿಗಳಿಗಾಗಿ ವಿಶೇಷ ಮಾರ್ಗಸೂಚಿ ಪ್ರಕಟಿಸಲಾಗಿದೆ ಎಂದು ಆರೋಗ್ಯ ಸಚಿವ ಡಾ. ಕೆ ಸುಧಾಕರ್ ತಿಳಿಸಿದ್ದಾರೆ.

- Advertisement -

ಟ್ವೀಟ್ ನಲ್ಲಿ ಮಾಹಿತಿ ನೀಡಿರುವ ಅವರು, ಮಾರ್ಗಸೂಚಿ ಅನ್ವಯ, ಒಮಿಕ್ರಾನ್ ಸೋಂಕು ಕಂಡುಬಂದ ಹತ್ತು ದಿನಗಳ ಬಳಿಕ ಯಾವುದೇ ರೋಗ ಲಕ್ಷಣಗಳಿಲ್ಲದಿರುವ ವ್ಯಕ್ತಿಯನ್ನು ಅಸ್ಪತ್ರೆಯಿಂದ ಬಿಡುಗಡೆ ಮಾಡಬಹುದಾಗಿದೆ. ಆಸ್ಪತ್ರೆಯಿಂದ ಬಿಡುಗಡೆಹೊಂದುವ 24 ಗಂಟೆಗಿಂತ ಮುಂಚಿನ 2 ಆರ್ ಟಿಪಿಸಿಆರ್ ನೆಗೆಟಿವ್ ವರದಿಗಳನ್ನು ವ್ಯಕ್ತಿ ಹೊಂದಿರಬೇಕು ಎಂದು ತಿಳಿಸಲಾಗಿದೆ ಎಂದಿದ್ದಾರೆ.


ಬಿಡುಗಡೆಯಾದ ನಂತರ ಕನಿಷ್ಠ 7 ದಿನಗಳ ವರೆಗೆ ವ್ಯಕ್ತಿ ಹೋಮ್ ಕ್ವಾರಂಟೈನ್‌ನಲ್ಲಿದ್ದು ಸ್ವ-ಪರಿಶೀಲನೆಗೆ ಒಳಪಡಬೇಕು. ಹೋಮ್ ಕ್ವಾರೆಂಟೈನ್ ಅವಧಿಯಲ್ಲಿ ಆರನೇ ದಿನಕ್ಕೆ ಮತ್ತೆ ವ್ಯಕ್ತಿ ಆರ್‌ಟಿಪಿಸಿಆರ್ ಪರೀಕ್ಷೆಗೆ ಒಳಪಡಬೇಕೆಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ

Join Whatsapp