ಸ್ಪೀಕರ್ ಯ.ಟಿ. ಖಾದರ್ ರನ್ನು ಭೇಟಿ ಮಾಡಿದ SIO ದ.ಕ. ಜಿಲ್ಲೆ ನಿಯೋಗ

Prasthutha|

ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯದ ಪದವಿ ಕಾಲೇಜನ್ನು ಮುಚ್ಚುವ ಸಂಚಿನ ಕುರಿತು SIO ದಕ್ಷಿಣ ಕನ್ನಡ ಜಿಲ್ಲೆಯ ನಿಯೋಗವು ಕರ್ನಾಟಕ ವಿಧಾನಸಭಾ ಸ್ಪೀಕರ್ ಯ.ಟಿ. ಖಾದರ್ ರನ್ನು ಭೇಟಿ ಮಾಡಿ ಮಾತುಕತೆ ನಡೆಸಿತು.

- Advertisement -

ವಿಶ್ವವಿದ್ಯಾಲಯದ ಪದವಿ ಕಾಲೇಜು ಹಲವಾರು ಬಡ ಹಾಗೂ ಗ್ರಾಮೀಣ ವರ್ಗದ ವಿದ್ಯಾರ್ಥಿಗಳ ಶೈಕ್ಷಣಿಕ ಬದುಕಿಗೆ ಆಶಾಕಿರಣವಾಗಿದ್ದು, ವಿ ವಿ ಕಾಲೇಜನ್ನು ಯಾವುದೇ ಕಾರಣಕ್ಕೂ ಮುಚ್ಚದಂತೆ ನೋಡಿಕೊಂಡು ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಅನುಕೂಲ ಮಾಡಬೇಕೆಂದು ಬೇಡಿಕೆಯನ್ನು ಇಡಲಾಯಿತು, ಇದಕ್ಕೆ ಸ್ಪಂದಿಸಿದ ಮಾನ್ಯ ಸ್ಪೀಕರ್ ತಕ್ಷಣವೇ ಸಂಬಂಧಪಟ್ಟ ಅಧಿಕಾರಿಗಳಿಗೆ ಕರೆ ಮಾಡಿ ವಿಚಾರಿಸಿ ಕಾಲೇಜನ್ನು ಮುಚ್ಚುವ ನಿರ್ಧಾರವನ್ನು ಪ್ರಶ್ನಿಸಿದರು ಹಾಗೂ ತಕ್ಷಣವೇ ದಾಖಲಾತಿಯನ್ನು ಪುನರಾರಂಭಿಸಲು ಆಗ್ರಹಿಸಿದರು. ಯಾವುದೇ ಕಾರಣಕ್ಕೂ ಶಿಕ್ಷಣ ಸಂಸ್ಥೆಯನ್ನು ಮುಚ್ಚಲು ಬಿಡುವುದಿಲ್ಲವೆಂದು ಭರವಸೆ ನೀಡಿದರು.

ಈ ನಿಯೋಗದಲ್ಲಿ ಎಸ್ ಐ ಓ ದ.ಕ ಸದಸ್ಯರಾದ ಹಯ್ಯಾನ್ ಕುದ್ರೋಳಿ, ಹುನೈನ್ ಉಳ್ಳಾಲ ಹಾಗೂ ಫಿರಾಸ್ ಉಪಸ್ಥಿತರಿದ್ದರು.

- Advertisement -

SIO ದಕ್ಷಿಣ ಕನ್ನಡ ನಿಯೋಗವು ಮಂಗಳೂರು ವಿಶ್ವವಿದ್ಯಾನಿಲಯದ ರಿಜಿಸ್ಟ್ರಾರ್ ರಾಜು ಮೊಗವೀರರನ್ನು ಭೇಟಿ ಮಾಡಿ ಮಾತುಕತೆ ನಡೆಸಿತು. ಈ ಸಂದರ್ಭದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಪದವಿ ಕಾಲೇಜನ್ನು ಮುಚ್ಚುವ ಸುದ್ದಿಯ ಕುರಿತು ಚರ್ಚೆ ನಡೆಸಿ, ಹಲವಾರು ಬಡ ಹಾಗೂ ಗ್ರಾಮೀಣ ವರ್ಗದ ವಿದ್ಯಾರ್ಥಿಗಳ ಬಾಳಿಗೆ ಆಶಾಕಿರಣವಾಗಿರುವ ವಿ ವಿ ಪದವಿ ಕಾಲೇಜನ್ನು ಯಾವುದೇ ಕಾರಣಕ್ಕೂ ಮುಚ್ಚದಂತೆ ನೋಡಿಕೊಂಡು ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಅನುಕೂಲ ಮಾಡಬೇಕೆಂದು ಬೇಡಿಕೆಯನ್ನಿರಿಸಲಾಯಿತು. ನಿಯೋಗದಲ್ಲಿ ಎಸ್ ಐ ಓ ಸದಸ್ಯರಾದ ಹುನೈನ್ ಹಾಗೂ ಫಿರಾಸ್ ಉಪಸ್ಥಿತರಿದ್ದರು.



Join Whatsapp