ಮಂಗಳೂರು: ಎಂಎಲ್ ಸಿ ಐವನ್ ಡಿ ಸೋಜ ಅವರ ಮನೆಗೆ ವಿಧಾನ ಸಭೆಯ ಸ್ಪೀಕರ್ ಯು.ಟಿ.ಖಾದರ್ ಗುರುವಾರ ಭೇಟಿ ನೀಡಿದ್ದಾರೆ.
ಮನೆಗೆ ಕಲ್ಲೆಸತದ ಘಟನೆಯ ಬಗ್ಗೆ ಖಾದರ್ ಅವರು ಐವನ್ ಡಿಸೋಜ ಕುಟುಂಬದ ಸದಸ್ಯರಿಂದ ಮಾಹಿತಿ ಪಡೆದರು.
ಬುಧವಾರ ರಾತ್ರಿ ಸುಮಾರು 11 ಗಂಟೆ ಸುಮಾರಿಗೆ ಮನೆ ಬಳಿಗೆ ತೆರಳಿದ್ದ ಐದಾರು ಮಂದಿ ಕಿಡಿಗೇಡಿಗಳು ಏಕಾಏಕಿ ಕಲ್ಲು ತೂರಿ ಘೋಷಣೆ ಕೂಗಿ ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ.
ಈ ಘಟನೆ ನಡೆದಾಗ ಐವನ್ ಡಿಸೋಜ ಅವರು ಮನೆಯಲ್ಲಿರಲಿಲ್ಲ. ಪಕ್ಷದ ಸಭೆಯಲ್ಲಿ ಭಾಗವಹಿಸುವ ಸಲುವಾಗಿ ಬೆಂಗಳೂರಿಗೆ ತೆರಳಿದ್ದರು ಎನ್ನಲಾಗಿದೆ.