ಬೆಂಗಳೂರು ವಿಮಾನ ನಿಲ್ದಾಣ ತಲುಪಿದ ಸ್ಪಂದನಾ ಮೃತದೇಹ; ಅಂತಿಮ ದರ್ಶನಕ್ಕೆ ಸಿದ್ಧತೆ

Prasthutha|

ಬೆಂಗಳೂರು: ನಿನ್ನೆ ಹೃದಯಾಘಾತದಿಂದ ವಿಜಯ್ ರಾಘವೇಂದ್ರ ಪತ್ನಿ ಸ್ಪಂದನಾ ಅವರು ನಿಧನರಾಗಿದ್ದಾರೆ. ಇಂದು ಸಂಜೆ ಥೈಲ್ಯಾಂಡ್ನಿಂದ ವಿಮಾನದಲ್ಲಿ ಮೃತದೇಹ ರವಾನೆಯಾಗಿದ್ದು, ಇದೀಗ ಬೆಂಗಳೂರು ಗ್ರಾ. ಜಿಲ್ಲೆಯ ದೇವನಹಳ್ಳಿ ಬಳಿಯ ಕೆಂಪೇಗೌಡ ಏರ್ಪೋರ್ಟ್ ತಲುಪಿದೆ.

- Advertisement -

ನಾಳೆ ಹರಿಶ್ಚಂದ್ರ ಘಾಟ್ ನಲ್ಲಿ ಸ್ಪಂದನಾ ಅಂತ್ಯ ಸಂಸ್ಕಾರಕ್ಕೆ ಕುಟುಂಬಸ್ಥರು ನಿರ್ಧಾರ ಮಾಡಿದ್ದಾರೆ. ಇದೀಗ ಏರ್ ಪೋರ್ಟ್ ಗೆ ಸ್ಪಂದನಾ ಮೃತದೇಹ ಬಂದಿದೆ. ಕೆಲವೇ ಕ್ಷಣಗಳಲ್ಲಿ ಮೃತದೇಹ ಮಲ್ಲೇಶ್ವರಂ ಮನೆಗೆ ತಲುಪಲಿದ್ದು, ಮನೆಯ ಬಳಿಯೇ ನಾಳೆ ಮಧ್ಯಾಹ್ನದ ವರೆಗೂ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ.

Join Whatsapp