ನೌಕಾದಳದ ಸಬ್‌ ಲೆಫ್ಟಿನೆಂಟ್‌ ಆಗಿ ಕೊಡಗಿನ ಕುವರಿ ಸ್ಪಂದನಾ ಸುರೇಶ್‌ ಆಯ್ಕೆ

Prasthutha|

ಮಡಿಕೇರಿ: ಕೊಡಗಿನ ಕುವರಿ ಸ್ಪಂದನಾ ಸುರೇಶ್‌ ಭಾರತೀಯ ನೌಕಾ ದಳದ ಸಬ್‌ ಲೆಫ್ಟಿನೆಂಟ್‌ ಆಗಿ ಆಯ್ಕೆಯಾಗಿದ್ದಾರೆ.

- Advertisement -

ಸ್ಪಂದನಾ ಸುಂಟಿಕೊಪ್ಪದ ಪ್ರಥಮ ದರ್ಜೆ ಗುತ್ತಿಗೆದಾರ ಕೆ. ಸುರೇಶ್‌ ಕುಮಾರ್‌ ಹಾಗೂ ಬೆಂಗಳೂರಿನ ಎಂ.ಎಸ್‌. ರಾಮಯ್ಯ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿರುವ ಪುಷ್ಪಲತಾ ದಂಪತಿ ಪುತ್ರಿ.

ಸುಂಟಿಕೊಪ್ಪದ ಸೇಂಟ್‌ ಆ್ಯನ್ಸ್‌ ನಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಸ್ಪಂದನಾ ಬೆಂಗಳೂರಿನ ನಿಟ್ಟೆ ತಾಂತ್ರಿಕ ವಿ.ವಿ.ಯಲ್ಲಿ ಎಂಜಿನಿಯರಿಂಗ್‌ ಪದವಿ ಪಡೆದಿದ್ದಾರೆ. ಈ ಹಿಂದೆ ದಿಲ್ಲಿಯಲ್ಲಿ ನಡೆದ ಗಣರಾಜ್ಯೋತ್ಸವ ಪರೇಡ್‌ ನಲ್ಲಿ ಅವರು ಕರ್ನಾಟಕವನ್ನು ಪ್ರತಿನಿಧಿಸಿದ್ದರು.

Join Whatsapp