ಕಾನ್ಪುರ: ಎಸ್‌ಪಿ ಶಾಸಕ ಇರ್ಫಾನ್ ಸೋಲಂಕಿಗೆ ಕಾನ್ಪುರದ ಎಂಪಿ-ಎಂಎಲ್‌ಎ ನ್ಯಾಯಾಲಯ ಏಳು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. 20 ಸಾವಿರ ರೂ. ದಂಡವನ್ನೂ ವಿಧಿಸಿದೆ.ಇರ್ಫಾನ್ ಸಹೋದರ ರಿಝ್ವಾನ್‌ಗೂ 7 ವರ್ಷ ಶಿಕ್ಷೆ ವಿಧಿಸಲಾಗಿದೆ.
ಮಹಾರಾಜಗಂಜ್ ಜೈಲಿನಲ್ಲಿರುವ ಇರ್ಫಾನ್ ಸೋಲಂಕಿ ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆ ಎದುರಿಸಿದ್ದರು.
ಜೂನ್ 3 ರಂದು ಜಾಜ್ಮೌ ಬೆಂಕಿ ಹಚ್ಚಿ ಮನೆ ಸುಟ್ಟ ಪ್ರಕರಣದಲ್ಲಿ ಎಸ್ಪಿ ಶಾಸಕ ಇರ್ಫಾನ್ ಸೋಲಂಕಿ ಸೇರಿದಂತೆ 5 ಮಂದಿಯನ್ನು ನ್ಯಾಯಾಲಯ ದೋಷಿ ಎಂದು ತೀರ್ಪು ನೀಡಿತ್ತು. ಶಾಸಕ ಇರ್ಫಾನ್, ಅವರ ಸಹೋದರ ರಿಝ್ವಾನ್ ಸೋಲಂಕಿ, ಶೌಕತ್ ಪೆಹಲ್ವಾನ್, ಇಸ್ರೇಲ್ ಆತೆ ವಾಲಾ ಮತ್ತು ಮೊಹಮ್ಮದ್ ಷರೀಫ್ ಅವರನ್ನು ಎಂಪಿಎಂಎಲ್ ನ್ಯಾಯಾಲಯ ದೋಷಿಗಳೆಂದು ಘೋಷಿಸಿತ್ತು. ಎಲ್ಲರಿಗೂ 7 ವರ್ಷಗಳು ಶಿಕ್ಷೆ ವಿಧಿಸಲಾಗಿದೆ.