ಠಾಣೆಯಲ್ಲಿ ಅಸಭ್ಯವರ್ತನೆ: ಇನ್ಸ್ ಪೆಕ್ಟರ್ ವಿರುದ್ಧ ಎಸ್ಪಿ, ಐಜಿಪಿಗೆ ದೂರು

Prasthutha|

ಹಾವೇರಿ: ಠಾಣೆಗೆ ದೂರು ನೀಡಲು ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿರುವ ಸರ್ಕಲ್ ಇನ್ಸ್‌ಪೆಕ್ಟರ್ ವಿರುದ್ಧ ಮಹಿಳೆಯೊಬ್ಬರು ಎಸ್ಪಿ, ಐಜಿಪಿಗೆ ದೂರು ನೀಡಿದ್ದಾರೆ.

- Advertisement -

ಹಾವೇರಿ ಜಿಲ್ಲೆಯ ಮಹಿಳಾ ಠಾಣೆಯ ಸಿಪಿಐ ಚಿದಾನಂದ ವಿರುದ್ಧ ದೂರು ನೀಡಲು ಬಂದಾಗ ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ಮಹಿಳೆಯು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ದೂರು ನೀಡಲು ಬಂದ ಮಹಿಳೆಯ ನಂಬರ್ ಪಡೆದಿದ್ದಂತ ಹಾವೇರಿ ಮಹಿಳಾ ಠಾಣೆಯ ಸಿಪಿಐ ಚಿದಾನಂದ ಅವರು, ಆಕೆಗೆ ವೀಡಿಯೋ ಕಾಲ್ ಮಾಡಿ ಅಸಭ್ಯವಾಗಿ ವರ್ತಿಸುತ್ತಿದ್ದಾರೆ ತಿಳಿದು ಬಂದಿದೆ.

- Advertisement -

ಇದುವರೆಗೆ ಸಿಪಿಐ ಚಿದಾನಂದ ಕಿರಿಕ್ ಸಹಿಸಿಕೊಂಡಿದ್ದಂತ ಮಹಿಳೆ, ಈಗ ಹಾವೇರಿ ಎಸ್ಪಿ ಹಾಗೂ ಪೂರ್ವ ವಲಯದ ಐಜಿಪಿಗೆ ಸಿಪಿಐ ಚಿದಾನಂದ ವಿರುದ್ಧ ದೂರು ನೀಡಿದ್ದಾರೆ. ಸೂಕ್ತ ಕ್ರಮಕ್ಕೆ ಆಗ್ರಹಿಸಿದ್ದಾರೆ.

Join Whatsapp