4 ವಿಶ್ವಕಪ್‌ಗಳಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಪ್ರತಿನಿಧಿಸಿದ್ದ ಫರ್ಹಾನ್ ಬೆಹರ್ಡಿಯನ್, ಮಂಗಳವಾರ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ.
ರಾಷ್ಟ್ರೀಯ ತಂಡದ ಪರ ಆಡಲು 8 ವರ್ಷಗಳ ಕಾದಿದ್ದ ಬೆಹರ್ಡಿಯನ್, ಆ ಬಳಿಕ ಏಕದಿನ ಮತ್ತು ಟಿ20 ಮಾದರಿಯಲ್ಲಿ ನಿಯಮಿತವಾಗಿ ಸ್ಥಾನ ಪಡೆದಿದ್ದರು. 2017ರಲ್ಲಿ ಶ್ರೀಲಂಕಾ ವಿರುದ್ಧದ ಟಿ20 ಸರಣಿಯಲ್ಲಿ ದಕ್ಷಿಣ ಆಫ್ರಿಕಾದ ತಂಡವನ್ನು ಫರ್ಹಾನ್ ಬೆಹರ್ಡಿಯನ್ ಮುನ್ನಡೆಸಿದ್ದರು. ರಾಷ್ಟ್ರೀಯ ತಂಡದ ಪರ 59 ಏಕದಿನ ಪಂದ್ಯಗಳಲ್ಲಿ 1074 ಮತ್ತು 38 ಟಿ20 ಪಂದ್ಯಗಳಲ್ಲಿ ಫರ್ಹಾನ್, 518 ರನ್‌ಗಳಿಸಿದ್ದಾರೆ.
2004ರಲ್ಲಿ ಪ್ರಥಮ ದರ್ಜೆ ಕ್ರಿಕೆಟ್ ಆಡಲು ಆರಂಭಿಸಿದ್ದ ಫರ್ಹಾನ್ ಬೆಹರ್ಡಿಯನ್, ಈ ಮಾದರಿಯಲ್ಲಿ 125 ಪಂದ್ಯಗಳಲ್ಲಿ 7 ಸಾವಿರಕ್ಕೂ ಅಧಿಕ ರನ್‌ಗಳಿಸಿದ್ದಾರೆ. ಅಜೇಯ 150 ಸರ್ವಾಧಿಕ ಮೊತ್ತವಾಗಿ ದಾಖಲಾಗಿದೆ. 18 ವರ್ಷಗಳಿಗೂ ಹೆಚ್ಚು ಕಾಲ ವೃತ್ತಿಪರ ಕ್ರಿಕೆಟ್ ಆಡಿದ್ದ ಆಲ್‌ರೌಂಡರ್, 39 ನೇ ವಯಸ್ಸಿನಲ್ಲಿ ನಿವೃತ್ತಿ ಘೋಷಿಸಿದ್ದಾರೆ.
ನಿವೃತ್ತಿ ಕುರಿತು ಟ್ವಿಟರ್‌ನಲ್ಲಿ ಸುದೀರ್ಘ ಪೋಸ್ಟ್ ಹಂಚಿಕೊಂಡಿರುವ ಕ್ರಿಕೆಟಿಗ, ʻ18 ವರ್ಷಗಳಿಗೂ ಹೆಚ್ಚು ಕಾಲ ಆಡಿದ ನಂತರ ವೃತ್ತಿಪರ ಕ್ರಿಕೆಟ್ ತ್ಯಜಿಸುವ ನಿರ್ಧಾರ ಕಠಿಣವಾಗಿತ್ತು. ಅದರಲ್ಲೂ ಕಳೆದ ಎರಡು ವಾರಗಳು ನನ್ನ ಪಾಲಿಗೆ ಪರೀಕ್ಷೆಯ ದಿನಗಳಾಗಿದ್ದವು ಎಂದು ಹೇಳಿದ್ದಾರೆ.