ನೇಪಾಳ ವಿರುದ್ಧ ಒಂದು ರನ್‌ ರೋಚಕ ಜಯಗಳಿಸಿದ ದಕ್ಷಿಣ ಆಫ್ರಿಕಾ

Prasthutha|

ಕಿಂಗ್‌ಸ್ಟೌನ್‌: ವೆಸ್ಟ್‌ ಇಂಡೀಸ್‌ನ ಅರ್ನೋಸ್ ವೇಲ್ ಕ್ರೀಡಾಂಗಣದಲ್ಲಿ ನಡೆದ ಟಿ20 ವಿಶ್ವಕಪ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡ ನೇಪಾಳ ತಂಡದ ವಿರುದ್ಧ ಒಂದು ರನ್‌ ರೋಚಕ ಜಯಗಳಿಸಿದೆ.

- Advertisement -

ಟಾಸ್ ಗೆದ್ದ ನೇಪಾಳ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದ್ದು, ದಕ್ಷಿಣ ಆಫ್ರಿಕಾ ಮೊದಲು ಬ್ಯಾಟಿಂಗ್ ಮಾಡಿತ್ತು. ಅದು 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 115 ರನ್ ಕಲೆಹಾಕಿತ್ತು.

ಈ ಗುರಿ ಬೆನ್ನಟ್ಟಿದ ನೇಪಾಳ ತಂಡಕ್ಕೆ 20 ಓವರ್‌ಗಳಲ್ಲಿ 7 ವಿಕೆಟ್‌ ನಷ್ಟಕ್ಕೆ 114 ರನ್‌ ಗಳಿಸಲಷ್ಟೇ ಸಾಧ್ಯವಾಗಿ ಸೋಲೊಪ್ಪಿಕೊಂಡಿತು.

- Advertisement -

ದಕ್ಷಿಣ ಆಫ್ರಿಕಾದ ಆರಂಭಿಕ ಆಟಗಾರ ರೀಜಾ ಹೆಂಡ್ರಿಕ್ಸ್ 49 ಎಸೆತಗಳಲ್ಲಿ 43 ರನ್ ಗಳಿಸಿದರೆ, ಟ್ರಿಸ್ಟಾನ್ ಸ್ಟಬ್ಸ್ 18 ಎಸೆತಗಳಲ್ಲಿ ಅಜೇಯ 27 ರನ್ ಸೇರಿಸಿದರು.

ಈ ಟೂರ್ನಿಯಲ್ಲಿ ಮೂರು ಪಂದ್ಯಗಳಲ್ಲಿ ಗೆಲುವು ಸಾಧಿಸಿರುವ ದಕ್ಷಿಣ ಆಫ್ರಿಕಾ ತಂಡ ಈಗಾಗಲೇ ಸೂಪರ್ 8ರ ಹಂತಕ್ಕೆ ಅರ್ಹತೆ ಪಡೆದಿದೆ. ಎರಡು ಪಂದ್ಯಗಳನ್ನು ಆಡಿರುವ ನೇಪಾಳ ಗೆಲುವು ಕಾಣುವಲ್ಲಿ ವಿಫಲವಾಯಿತು.

Join Whatsapp