ಜೋಹಾನ್ಸ್ ಬರ್ಗ್: ದಕ್ಷಿಣ ಆಫ್ರಿಕಾದ ಚರ್ಚ್ ಒಂದರಲ್ಲಿ ಈಜಿಪ್ಟ್ ಮೂಲದ ‘ಕಾಪ್ಟಿಕ್ ಅರ್ಥಡಾಕ್ಸ್ ಚರ್ಚ್’ನ ಮೂವರು ಸನ್ಯಾಸಿಗಳನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ.
ಹತ್ಯೆಯಾದವರನ್ನು ಫಾದರ್ ಹೆಗುಮನ್ ಟಾಕಲಾ (55) ಯೋಸತೊಸಾ ಅವಾ ಮಾರ್ಕೊಸ್ (43) ಮತ್ತು ಮಿನಾ ಅವಾ ಮಾರ್ಕೋಸ್ (42) ಎಂದು ಗುರುತಿಸಲಾಗಿದೆ.
ದಕ್ಷಿಣ ಆಫ್ರಿಕಾದ ಪೂರ್ವ ಭಾಗವಾದ ಪ್ರಿಟೋರಿಯಾದಿಂದ ಸುಮಾರು 50 ಕಿ.ಮೀ ದೂರ ಇರುವ ಸಣ್ಣ ಪಟ್ಟಣವಾದ ಕಲ್ಲಿನಾನ್ ಎಂಬ ಪ್ರದೇಶದಲ್ಲಿ ಮಂಗಳವಾರ ರಾತ್ರಿ ಈ ಘಟನೆ ನಡೆದಿದೆ ಎಂದು ದಕ್ಷಿಣ ಆಫ್ರಿಕಾ ಪೊಲೀಸ್ ಸರ್ವಿಸ್ ನ ಅಧಿಕಾರಿಗಳು ತಿಳಿಸಿದ್ದಾರೆ. ‘ದುಷ್ಕರ್ಮಿಗಳು ಹರಿತ ಆಯುಧಗಳಿಂದ ಮೂವರು ಸನ್ಯಾಸಿಗಳನ್ನು ಕತ್ತು ಸೀಳಿ, ಎದೆಗೆ ಇರಿದು ಹತ್ಯೆ ಮಾಡಿದ್ದಾರೆ. ಘಟನೆ ನಡೆಯುವಾಗ ಸ್ಥಳದಲ್ಲಿಯೇ ಇದ್ದ ಇನ್ನೊಬ್ಬ ಸನ್ಯಾಸಿ ತಪ್ಪಿಸಿಕೊಂಡು ಪ್ರಾಣಾಪಾಯದಿಂದ ಪಾರಾಗಿದ್ದಾರೆ.