ನ್ಯೂಯಾರ್ಕ್: ಇಲ್ಲಿನ ನಾಸೌ ಕೌಂಟಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಟಿ20 ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಡಿ ಗುಂಪಿನ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡ ಶ್ರೀಲಂಕಾವನ್ನು ಸೋಲಿಸಿ ಶುಭಾರಂಭ ಮಾಡಿಕೊಂಡಿದೆ.
ಬೌಲಿಂಗ್‌ನಲ್ಲಿ ಅಬ್ಬರಿಸಿದ ಸೌತ್ ಆಫ್ರಿಕಾ, ಶ್ರೀಲಂಕಾವನ್ನು ಅಲ್ಪಮೊತ್ತಕ್ಕೆ ಕಟ್ಟಿಹಾಕಿತು. ಆನ್ರಿಚ್ ನಾರ್ಟ್ಜೆ ಮಾರಕ ಬೌಲಿಂಗ್ ಪ್ರದರ್ಶನ ನೀಡಿದರು. ಆ ಬಳಿಕ ಹೆನ್ರಿಚ್ ಕ್ಲಾಸೆನ್ ಜವಾಬ್ದಾರಿಯುತ ಬ್ಯಾಟಿಂಗ್ ನೆರವಿಂದ ನೂತನ ನ್ಯೂಯಾರ್ಕ್ ಸ್ಟೇಡಿಯಂನಲ್ಲಿ ಹರಿಣಗಳು ಜಯದ ಆರಂಭ ಪಡೆದರು.
ಟಾಸ್ ಗೆದ್ದ ಶ್ರೀಲಂಕಾ ತಂಡ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು.ಆದರೆ ನಾಯಕ ವನಿಂದು ಹಸರಂಗಾ ಅವರ ಲೆಕ್ಕಾಚಾರ ದಕ್ಷಿಣ ಆಫ್ರಿಕಾ ತಂಡದ ನಾಕಿಯಾ (7ಕ್ಕೆ4) ದಾಳಿಯ ಮುಂದೆ ತಲೆಕೆಳಗಾಯಿತು. 19.1 ಓವರ್‌ಗಳಲ್ಲಿ ಕೇವಲ 77 ರನ್ ಗಳಿಸಿ ಆಲೌಟ್ ಆಯಿತು.
ಆದರೆ ಅಲ್ಪ ಮೊತ್ತದ ಗುರಿ ಬೆನ್ನಟ್ಟಿದ್ದ ದಕ್ಷಿಣ ಆಫ್ರಿಕಾ ತಂಡಕ್ಕೆ ಗೆಲುವು ಸುಲಭವಾಗಲಿಲ್ಲ. ಶ್ರೀಲಂಕಾದ ಬೌಲರ್‌ಗಳು ಸವಾಲೊಡ್ಡಿದರು.16.2 ಓವರ್‌ಗಳ ತನಕ ಆಡಿ 4 ವಿಕೆಟ್‌ಗೆ 80 ರನ್ ಗಳಿಸಿತು. ಆರು ವಿಕೆಟ್‌ಗಳಿಂದ ಜಯಿಸಿತು. ದ. ಆಫ್ರಿಕಾದ ರೀಜಾ ಹೆಂಡ್ರಿಕ್ಸ್ (4), ಏಡನ್ ಮರ್ಕರಂ (12) ಮತ್ತು ಟ್ರಿಸ್ಟನ್ ಸ್ಟಬ್ಸ್ (13) ನಿರಾಸೆ ಮೂಡಿಸಿದರು.
ಸಂಕ್ಷಿಪ್ತ ಸ್ಕೋರು ವಿವರ:
ಶ್ರೀಲಂಕಾ: 19.1 ಓವರ್‌ಗಳಲ್ಲಿ 77 (ಕುಶಾಲ ಮೆಂಡಿಸ್ 19, ಕಮಿಂದು ಮೆಂಡಿಸ್ 11, ಏಂಜೆಲೊ ಮ್ಯಾಥ್ಯೂಸ್ 16, ಕಗಿಸೊ ರಬಾಡ 21ಕ್ಕೆ2, ಕೇಶವ್ ಮಹಾರಾಜ 22ಕ್ಕೆ2, ಎನ್ರಿಚ್ ನಾಕಿಯಾ 7ಕ್ಕೆ4)
ದಕ್ಷಿಣ ಆಫ್ರಿಕಾ: 16.2 ಓವರ್‌ಗಳಲ್ಲಿ 4 ವಿಕೆಟ್‌ಗೆ 80 (ಕ್ವಿಂಟನ್ ಡಿಕಾಕ್ 20, ಟ್ರಿಸ್ಟನ್ ಸ್ಟಬ್ಸ್ 13, ಹೆನ್ರಿಚ್ ಕ್ಲಾಸೆನ್ ಅಜೇಯ 19, ವನಿಂದು ಹಸರಂಗಾ 22ಕ್ಕೆ2, ದಾಸುನ್ ಶನಕಾ 6ಕ್ಕೆ1).
ಪಂದ್ಯ ಶ್ರೇಷ್ಠ: ಎನ್ರಿಚ್ ನಾಕಿಯ