ಗುರ್ಗಾಂವ್: ವಿರಾಟ್ ಕೊಹ್ಲಿ ಹಾಗೂ BCCI ನಡುವಿನ ತಿಕ್ಕಾಟ ತಣ್ಣಗಾಗುವ ಮುನ್ನವೇ BCCI ಅಧ್ಯಕ್ಷ ಸೌರವ್ ಗಂಗೂಲಿ ಮತ್ತೊಂದು ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ಗುರ್ಗಾಂವ್’ನಲ್ಲಿ ನಡೆದ ಖಾಸಗಿ ಕಾರ್ಯಕ್ರಮವೊಂದರಲ್ಲಿ ಮಾತನಾಡುವ ವೇಳೆ ‘ಜೀವನದಲ್ಲಿ ಒತ್ತಡವನ್ನು ಹೇಗೆ ನಿರ್ವಹಿಸುತ್ತೀರಿ ಎಂಬ ಪ್ರಶ್ನೆಗೆ ಉತ್ತರಿಸಿದ ಸೌರವ್ ಗಂಗೂಲಿ, ಜೀವನದಲ್ಲಿ ಒತ್ತಡ ಇಲ್ಲ. ಪತ್ನಿ ಹಾಗೂ ಪ್ರೇಯಸಿಯಷ್ಟೇ ಒತ್ತಡ ಎಂದು ಹೇಳಿದ್ದಾರೆ. ಹಾಸ್ಯ ಸೂಚಕವಾಗಿ ಹೇಳಿದ್ದರೂ ಸಹ, ಗಂಗೂಲಿ ಆಡಿರುವ ಮಾತು ಇದೀಗ ವ್ಯಾಪಕ ಟೀಕೆಗೆ ಗುರಿಯಾಗಿದೆ.
ಗಂಗೂಲಿ ಹೇಳಿಕೆಗೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ಷೇಪ ವ್ಯಕ್ತವಾಗಿದ್ದು, ಮೀಮ್ಸ್’ಗಳನ್ನು ಬಳಸಿ ಟ್ರೋಲ್ ಮಾಡುತ್ತಿದ್ದಾರೆ. ಇದೇ ವೇಳೆ ಯಾವ ಕ್ರಿಕೆಟಿಗರ ವರ್ತನೆ ನಿಮಗೆ ಬಹಳ ಇಷ್ಟ ಎಂಬ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ, ‘ನನಗೆ ವಿರಾಟ್ ಕೊಹ್ಲಿ ವರ್ತನೆ ಇಷ್ಟವಾಗುತ್ತದೆ ಆದರೆ ಅವರು ಬಹಳಷ್ಟು ಜಗಳವಾಡುತ್ತಾರೆ’ ಎಂದಿದ್ದಾರೆ.
ನಾಯಕತ್ವದ ವಿವಾದದಲ್ಲಿ ಪ್ರತಿಕ್ರಿಯೆ ನೀಡಿದ್ದ ಗಂಗೂಲಿ, ಬಿಸಿಸಿಐ ಕೊಹ್ಲಿಯನ್ನು T-20 ನಾಯಕತ್ವ ತ್ಯಜಿಸದಂತೆ ಕೇಳಿತ್ತು. ವೈಟ್ ಬಾಲ್ ಫಾರ್ಮೆಟ್ ಗಳಿಗೆ ಒಬ್ಬನೇ ನಾಯಕ ಇರಬೇಕೆಂಬ ಉದ್ದೇಶದಿಂದ ಆಯ್ಕೆಗಾರರು ಕೊಹ್ಲಿಯನ್ನು 50 ಓವರ್ ಗಳ ಆವೃತ್ತಿಯಿಂದ ಕೊಹ್ಲಿ ಅವರನ್ನು ಕೈಬಿಡಲಾಗಿತ್ತು ಎಂದಿದ್ದರು. ಆದರೆ ಆಫ್ರಿಕಾ ಪ್ರಯಾಣಕ್ಕೂ ಮೊದಲು ನಡೆಸಿದ ಸುದ್ದಿಗೋಷ್ಠಿಯಲ್ಲಿ ಗಂಗೂಲಿ ಹೇಳಿಕೆಯನ್ನು ಕೊಹ್ಲಿ ನಿರಾಕರಿಸಿದ್ದರು.