ಗ್ರಾಹಕರ ಪಾಲಿಗೆ ಹುಳಿಯಾದ ಟೊಮ್ಯಾಟೊ: ಉಳಿದ ತರಕಾರಿಗಳು ದುಬಾರಿ!

Prasthutha|

ಬೆಂಗಳೂರು: ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕಳೆದ ಒಂದು ವಾರದಿಂದ ತರಕಾರಿಗಳ ಬೆಲೆ ಗಗನಮುಖಿಯಾಗುತ್ತಿದೆ. ಟೊಮ್ಯಾಟೊ ದರ ನೂರು ರೂಪಾಯಿ ಸನಿಹಕ್ಕೆ ಬಂದಿದ್ದು, 15 Kg ಟೊಮ್ಯಾಟೊ ಬಾಕ್ಸ್ ಸಾವಿರ ರೂ ಇದೆ. ಇನ್ನೆರಡು ದಿನದಲ್ಲಿ ಟೊಮ್ಯಾಟೊ ದರ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

- Advertisement -


ಸಾಧಾರಣ ಟೊಮೆಟೊ ಬೆಲೆ ಕೆಜಿಗೆ 30 ರಿಂದ 40 ರೂ. ಇತ್ತು. ಭಾನುವಾರ ಸಂಜೆಯ ವೇಳೆಗೆ ಕೆಜಿಗೆ 50 ರಿಂದ 60 ರೂಪಾಯಿಗೆ ಏರಿಕೆ ಕಂಡಿದೆ. ಉತ್ತಮ ಗುಣಮಟ್ಟದ ಟೊಮೆಟೊ ಬೆಲೆ 80 ರಿಂದ 90 ರೂ. ತನಕ ಏರಿಕೆಯಾಗಿದೆ. ಸರಿಯಾದ ಪೂರೈಕೆಯಾಗದ ಕಾರಣ ಅನೇಕ ಜಿಲ್ಲೆಗಳಲ್ಲಿ ಟೊಮೆಟೊ ಮತ್ತು ತರಕಾರಿಗಳ ಅಭಾವ ಎದುರಾಗಿದ್ದು, ಎಲ್ಲಾ ತರಕಾರಿಗಳ ಬೆಲೆಗಳು ಸಹ ಏರಿಕೆ ಕಂಡಿವೆ. ಇತರ ತರಕಾರಿಗಳ ಬೆಲೆಗಳು ಸಹ ಏರಿಕೆ ಕಂಡಿದ್ದು, ಜನರ ಜೇಬಿಗೆ ಕತ್ತರಿ ಬಿದ್ದಿದೆ. ಶುಂಠಿ ಪ್ರತಿ ಕೆಜಿಗೆ 310 ರೂ. ಆಗಿದೆ. ಕಡಿಮೆ ಬೆಲೆಗೆ ಸಿಗುತ್ತಿದ್ದ ಬದನೆಕಾಯಿ, ಬಟಾಣಿ ಹಾಗೂ ಮೆಣಸಿನಕಾಯಿ ದರಗಳು ಸಹ ಏರಿಕೆ ಕಂಡಿವೆ.