ಆಸ್ಪತ್ರೆಯ ಜಾಹೀರಾತಿನಲ್ಲಿ ನಟಿಸಲು 50 ಬಡ ಜನರಿಗೆ ಪಿತ್ತಜನಕಾಂಗದ ಶಸ್ತ್ರಚಿಕಿತ್ಸೆ ಮಾಡಿಸಲು ಸೋನು ಸೂದ್ ಆಗ್ರಹ

Prasthutha|

ಮುಂಬೈ: ಬಾಲಿವುಡ್ ನಟ ಸೋನು ಸೂದ್ ಸಾಮಾಜಿಕ  ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದು, ಕೋವಿಡ್ ಸಾಂಕ್ರಾಮಿಕ ರೋಗದ ಸಮಯದಲ್ಲಿ ಸೂದ್ ಅವರ ಕೆಲಸ ಹೆಚ್ಚು ಶ್ಲಾಘಿಸಲ್ಪಟ್ಟಿತ್ತು.

- Advertisement -

ಲಾಕ್ ಡೌನ್ ಸಮಯದಲ್ಲಿ ವಲಸೆ ಕಾರ್ಮಿಕರನ್ನು ತಾಯ್ನಾಡಿಗೆ  ಮರಳಿಸಲು ಮತ್ತು ಆಸ್ಪತ್ರೆಗಳಿಗೆ ಆಮ್ಲಜನಕ ಸೇರಿದಂತೆ ಸೌಲಭ್ಯಗಳನ್ನು ಒದಗಿಸಲು ಸೋನು ಸೂದ್  ಹಲವು ಸೇವಾ ಕ್ರಮಗಳನ್ನು ಕೈಗೊಂಡಿದ್ದರು. ಇದೀಗ  ಅವರು ಮತ್ತೊಂದು ವಿಭಿನ್ನ ಸಾಮಾಜಿಕ  ಚಟುವಟಿಕೆಯಲ್ಲಿ ಭಾಗಿಯಾಗಿ ಮಾದರಿಯಾಗಿದ್ದಾರೆ.

ಪ್ರಮುಖ ಆಸ್ಪತ್ರೆಯೊಂದರ ಜಾಹೀರಾತಿನಲ್ಲಿ ನಟಿಸಲು 50 ಯಕೃತ್ತು ಕಸಿ ಶಸ್ತ್ರಚಿಕಿತ್ಸೆ ನಡೆಸಬೇಕು ಎಂಬ ಬೇಡಿಕೆ ಇಟ್ಟಿರುವ ನಟ ಸೋನು ಸೂದ್  ದಿ ಮ್ಯಾನ್ ನಿಯತಕಾಲಿಕೆಗೆ ನೀಡಿದ ಸಂದರ್ಶನದಲ್ಲಿ ಇದನ್ನು ಬಹಿರಂಗಪಡಿಸಿದ್ದಾರೆ. ಸುಮಾರು 50 ಬಡ ಜನರು ಯಕೃತ್ತು ಕಸಿ ಶಸ್ತ್ರಚಿಕಿತ್ಸೆಗೆ ಒಳಗಾಗಲು 12 ಕೋಟಿ ರೂ.ಗಳು ಬೇಕಾಗುತ್ತವೆ ಎಂದು ಸೋನು ಸೂದ್ ಹೇಳಿದರು.

- Advertisement -

ಪ್ರಸ್ತುತ ಯಕೃತ್ತಿನ ಕಸಿ ನಡೆಯುತ್ತಿದೆ. ಆರ್ಥಿಕವಾಗಿ ಹಿಂದುಳಿದವರಿಗೆ ಈ ನೆರವು ನೀಡಲಾಗುತ್ತಿದ್ದು, ಪ್ರಸ್ತುತ ಎರಡು ಶಸ್ತ್ರಚಿಕಿತ್ಸೆಗಳು ನಡೆಯುತ್ತಿವೆ ಎಂದು ಸೂದ್ ಹೇಳಿದರು.

Join Whatsapp