ಹೆತ್ತವರ ದೇವಾಲಯ ನಿರ್ಮಾಣ ಮಾಡಿದ ಮಕ್ಕಳು!

Prasthutha|

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಕಲ್ಲೂಡಿ ಗ್ರಾಮದ ಬಳಿ ಹೆತ್ತವರಿಗಾಗಿ ತಮ್ಮ ಮಕ್ಕಳು ದೇವಾಲಯ ನಿರ್ಮಾಣ ಮಾಡಿ ಪೂಜೆ ಮಾಡುತ್ತಿದ್ದಾರೆ.
ಕಲ್ಲೂಡಿ ಗ್ರಾಮದ ಬಾಬಣ್ಣ ಮತ್ತು ಸಹೊದರರು ತಮ್ಮ ತಂದೆ ನರಸಯ್ಯ ಹಾಗೂ ತಾಯಿ ಗೌರಮ್ಮನವರ ದೇವಾಲಯ ನಿರ್ಮಿಸಿದ್ದಾರೆ. ಮಾತ್ರವಲ್ಲದೆ ಅವರ ಪ್ರತಿಮೆಗಳಿಗೆ ಪ್ರತಿನಿತ್ಯ ಪೂಜೆ ಮಾಡುತ್ತಿದ್ದಾರೆ.

- Advertisement -


ಇನ್ನು ನರಸಪ್ಪ-ಗೌರಮ್ಮ ದಂಪತಿಗೆ 10 ಮಂದಿ ಮಕ್ಕಳಿದ್ದು, ತಾಯಿ ಗೌರಮ್ಮನವರು 2014 ರಲ್ಲಿ ತೀರಿಕೊಂಡಿದ್ದರು. ನರಸಪ್ಪನವರು 2022 ರಲ್ಲಿ ತೀರಿಕೊಂಡಿದ್ದಾರೆ.
ದೇವಾಲಯ ನಿರ್ಮಾಣದಿಂದ ತಮ್ಮ ತಂದೆ ತಾಯಿಯ ನೆನಪುಗಳು ಅಚ್ಚಳಿಯದಂತೆ ಉಳಿಯಬೇಕು. ತಂದೆ ತಾಯಿಯ ಪ್ರತಿರೂಪ ತಮ್ಮ ಕಣ್ಣು ಮುಂದೆಯೇ ಇರಬೇಕು ಎಂದು ಬಾಬಣ್ಣನವರು ರಾಜಸ್ಥಾನದ ನುರಿತ ಶಿಲ್ಪಿಗಳಿಂದ ಪ್ರತಿಮೆಗಳನ್ನು ಮಾಡಿಸಿ ಪ್ರತಿಷ್ಠಾಪನೆ ಮಾಡಿದ್ದಾರೆ.


ತಂದೆ ತಾಯಿಯ ಪ್ರತಿಮೆಗಳಿಗೆ ಪೂಜೆ ಮಾಡಿ ತಂದೆ ತಾಯಿಯ ಶ್ರಮವನ್ನು ನೆನಪಿಸಿಕೊಳ್ಳುತ್ತಿದ್ದೇವೆ ಎಂದು ಬಾಬಣ್ಣ ಅವರ ಸಹೋದರ ಸುರೇಶ್ ಹೇಳುತ್ತಾರೆ.



Join Whatsapp