ದೆಹಲಿ: ಕಾಂಗ್ರೆಸ್ ನ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ರಾಜ್ಯಸಭಾ ಚುನಾವಣೆಗೆ ಅಫಿಡವಿಟ್ ನಲ್ಲಿ ₹ 12.53 ಕೋಟಿ ಆಸ್ತಿಯನ್ನು ಘೋಷಿಸಿದ್ದಾರೆ.
ಇಟಲಿಯಲ್ಲಿರುವ ತಂದೆಯ ಆಸ್ತಿಯಲ್ಲಿ ಸೋನಿಯಾ ಗಾಂಧಿ ಅವರಿಗೂ ₹27 ಲಕ್ಷ ಮೌಲ್ಯದ ಷೇರುಗಳಿವೆ. ಇದಲ್ಲದೆ 88 ಕೆಜಿ ಬೆಳ್ಳಿ, 1,267 ಗ್ರಾಂ ಚಿನ್ನಾಭರಣಗಳನ್ನು ಹೊಂದಿದ್ದಾರೆ.
ನವದೆಹಲಿಯ ಡೇರಾ ಮಂಡಿ ಗ್ರಾಮದಲ್ಲಿ ಕಾಂಗ್ರೆಸ್ ನಾಯಕಿಗೆ ಮೂರು ಬಿಘಾ(1.20 ಎಕರೆ) ಕೃಷಿ ಭೂಮಿ ಹೊಂದಿದ್ದಾರೆ. ಅವರ ಆದಾಯವನ್ನು ಅವರ ಸಂಸದರ ವೇತನ, ರಾಯಧನ ಆದಾಯ, ಬಂಡವಾಳ ಲಾಭ ಇತ್ಯಾದಿ ಎಂದು ನಮೂದಿಸಲಾಗಿದೆ.
1965 ರಲ್ಲಿ, ಅವರು ಕೇಂಬ್ರಿಡ್ಜ್ ನ ಲೆನಾಕ್ಸ್ ಕುಕ್ ಸ್ಕೂಲ್ ನಿಂದ ಇಂಗ್ಲಿಷ್ನಲ್ಲಿ ಸರ್ಟಿಫಿಕೇಟ್ ಕೋರ್ಸ್ ಮಾಡಿದರು. ಸೋನಿಯಾ ಗಾಂಧಿಗೆ ಸ್ವಂತ ಕಾರು ಇಲ್ಲ, ಸಾಮಾಜಿಕ ಜಾಲತಾಣ ಖಾತೆಯೂ ಇಲ್ಲ. ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸದಿರಲು ನಿರ್ಧರಿಸಿದ ಸೋನಿಯಾ ಗಾಂಧಿ, ರಾಜಸ್ಥಾನದಿಂದ ರಾಜ್ಯಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸಿದರು.