ದೆಹಲಿ: ಕಾಂಗ್ರೆಸ್ ​ನ ನೂತನ ಪ್ರಧಾನ​ ಕಚೇರಿ ‘ಇಂದಿರಾ ಭವನ’ ಉದ್ಘಾಟಿಸಿದ ಸೋನಿಯಾ ಗಾಂಧಿ

Prasthutha|

ನವದೆಹಲಿ: ದೆಹಲಿಯಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಕಾಂಗ್ರೆಸ್​ ಪಕ್ಷದ ಪ್ರಧಾನ ಕಚೇರಿಯನ್ನು ಕಾಂಗ್ರೆಸ್​ನ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಉದ್ಘಾಟಿಸಿದರು. ಉದ್ಘಾಟನಾ ಸಮಾರಂಭದಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸಂಸದ ರಾಹುಲ್ ಗಾಂಧಿ ಮತ್ತು ಪಕ್ಷದ ಹಲವಾರು ಪ್ರಮುಖ ನಾಯಕರು ಉಪಸ್ಥಿತರಿದ್ದರು.

- Advertisement -

ಪ್ರಧಾನ ಕಚೇರಿಗೆ ದಿವಂಗತ ಪ್ರಧಾನಿ ಇಂದಿರಾ ಗಾಂಧಿಯವರ ಹೆಸರನ್ನು ಇಡಲಾಗಿದೆ ಅವರ ಪರಂಪರೆ ಮತ್ತು ರಾಷ್ಟ್ರ ಮತ್ತು ಪಕ್ಷಕ್ಕೆ ನೀಡಿದ ಕೊಡುಗೆಗಳಿಗೆ ಗೌರವಾರ್ಥವಾಗಿ ಈ ಹೆಸರು ಇಡಲಾಗಿದೆ. ಕಾರ್ಯಕ್ರಮದಲ್ಲಿ ಪಕ್ಷದ ಮುಖಂಡರು ನೂತನ ಪ್ರಧಾನ ಕಚೇರಿಯಲ್ಲಿ ಪಕ್ಷದ ಧ್ವಜಾರೋಹಣ ನೆರವೇರಿಸಿ ವಂದೇ ಮಾತರಂ ಹಾಗೂ ರಾಷ್ಟ್ರಗೀತೆಯನ್ನು ಹಾಡಿದರು. ನಂತರ ಸೋನಿಯಾ ಗಾಂಧಿ ಅವರು ಕಟ್ಟಡವನ್ನು ಉದ್ಘಾಟಿಸಿದರು.

ಕೇಂದ್ರದಲ್ಲಿ ಕಾಂಗ್ರೆಸ್ ತನ್ನ ಸರ್ಕಾರವನ್ನು ಕಳೆದುಕೊಂಡಾಗಿನಿಂದ ಹೊಸ ಎಐಸಿಸಿ ಪ್ರಧಾನ ಕಚೇರಿಯ ನಿರ್ಮಾಣವು ಹಣದ ಕೊರತೆ ಯಿಂದ ಹಲವಾರು ವರ್ಷಗಳ ಕಾಲ ವಿಳಂಬವಾಯಿತು. ಇಂದಿರಾ ಭವನ’ ಪಕ್ಷ ಮತ್ತು ಅದರ ನಾಯಕರ ಹೆಚ್ಚುತ್ತಿರುವ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ವಿನ್ಯಾಸಗೊಳಿಸಲಾಗಿದೆ, ಆಡಳಿತಾತ್ಮಕ, ಸಾಂಸ್ಥಿಕ ಮತ್ತು ಕಾರ್ಯತಂತ್ರದ ಕಾರ್ಯಗಳನ್ನು ಬೆಂಬಲಿಸಲು ಆಧುನಿಕ ಸೌಲಭ್ಯಗಳನ್ನು ಹೊಂದಿದೆ.

- Advertisement -

ಹೊಸ ಅತ್ಯಾಧುನಿಕ ಎಐಸಿಸಿ ಪ್ರಧಾನ ಕಚೇರಿ – ಇಂದಿರಾ ಗಾಂಧಿ ಭವನ, ತನ್ನ ಧೀಮಂತ ನಾಯಕರ ದೃಷ್ಟಿಕೋನವನ್ನು ಎತ್ತಿಹಿಡಿಯುವ ಕಾಂಗ್ರೆಸ್ ಪಕ್ಷದ ನಿರಂತರ ಧ್ಯೇಯವನ್ನು ಸಂಕೇತಿಸುತ್ತದೆ ಎಂದು ಈ ಹಿಂದೆ ಪಕ್ಷ ಹೇಳಿತ್ತು.

“ಇಂದಿರಾ ಗಾಂಧಿ ಭವನದ ನಿರ್ಮಾಣವನ್ನು ಸೋನಿಯಾ ಗಾಂಧಿ ಕಾಂಗ್ರೆಸ್ ಮುಖ್ಯಸ್ಥೆಯಾಗಿದ್ದಾಗ ಪ್ರಾರಂಭಿಸಲಾಗಿತ್ತು.



Join Whatsapp