ರೈತ ಕ್ರಾಂತಿ ಗೀತೆ ಯೂಟ್ಯೂಬ್ ನಿಂದ ಡಿಲೀಟ್!

Prasthutha|

ರೈತರ ಪ್ರತಿಭಟನೆಗೆ ಪ್ರಚೋದನೆ ನೀಡಿದ್ದ ಪಂಜಾಬಿ ಗಾಯಕ ಕನ್ವರ್ ಗ್ರೆವಾಲ್ ಅವರ ‘ಐಲಾನ್’ ಮತ್ತು ಹಿಮಾತ್ ಸಂಧು ಅವರ ‘ಅಸೀ ವದಾಂಗೆ’ ಕ್ರಾಂತಿ ಗೀತೆಗಳನ್ನು ಯೂಟ್ಯೂಬ್ ನಿಂದ ಅಳಿಸಿ ಹಾಕಲಾಗಿದೆ. ಹಾಡುಗಳನ್ನು ಅಧಿಕೃತ ಖಾತೆಗಳಿಂದ ತೆಗೆದುಹಾಕಲಾಗಿದ್ದರೂ, ಇತರ ಖಾತೆಗಳಿಂದ ಹಾಡುಗಳನ್ನು ಅಪ್‌ಲೋಡ್ ಮಾಡಲು ರೈತರು ನಿರ್ಧರಿಸಿದ್ದಾರೆ. ಕೇಂದ್ರ ಸರ್ಕಾರದ ದೂರಿನ ಹಿನ್ನೆಲೆಯಲ್ಲಿ ಯೂಟ್ಯೂಬ್ ಈ ಕ್ರಮ ಕೈಗೊಂಡಿದೆ ಎಂದು ವರದಿಯಾಗಿದೆ.

- Advertisement -

ಕನ್ವರ್ ಅವರ ಹಾಡು ಪ್ರತಿಭಟನೆಯ ಧ್ವನಿಯಾಗಿ ಬದಲಾಗಿದೆ. ಅಳಿಸಿ ಹಾಕುವುದಕ್ಕೂ ಮೊದಲು ಒಂದು ಕೋಟಿ ಜನರು ಅದನ್ನು ವೀಕ್ಷಿಸಿದ್ದಾರೆ. ರೈತರಾಗಿದ್ದಾರೆ ಕೃಷಿಯ ಬಗ್ಗೆ ನಿರ್ಧಾರ ತೆಗೆದುಕೊಳ್ಳಬೇಕಾದವರು, ಬೇರೆ ಯಾರೂ ಅಲ್ಲ ಎಂಬುದಾಗಿದೆ ಈ ಹಾಡಿನ ಒಳಾರ್ಥ. ರೈತರ ಹೋರಾಟವನ್ನು ಬೆಂಬಲಿಸಿ ಹಿಮಾತ್ ಸಂಧು ಅವರ ಹಾಡನ್ನು ನಾಲ್ಕು ತಿಂಗಳ ಹಿಂದೆ ಯೂಟ್ಯೂಬ್‌ನಲ್ಲಿ ಪೋಸ್ಟ್ ಮಾಡಲಾಗಿತ್ತು. ಈ ಹಾಡನ್ನು ಲಕ್ಷಾಂತರ ಜನರು ವೀಕ್ಷಿಸಿದ್ದಾರೆ.

ಸರಕಾರವು ಯುಟ್ಯೂಬ್ ನಿಂದ ಈ ಹಾಡುಗಳನ್ನು ತೆಗೆದು ಹಾಕಿದರೂ ಜನರ ಹೃದಯದಿಂದ ಅಳಿಸಲು ಸಾಧ್ಯವಿಲ್ಲ ಎಂದು ರೈತ ಮುಖಂಡರು ಪ್ರತಿಕ್ರಿಯಿಸಿದ್ದಾರೆ. ರೈತರ ಹೋರಾಟವನ್ನು ಬೆಂಬಲಿಸಿ ಟ್ವೀಟ್ ಮಾಡಿದ್ದ  250 ಖಾತೆಗಳನ್ನು ಟ್ವಿಟರ್ ನಿರ್ಬಂಧಿಸಿತ್ತು. ರೈತರ ಹತ್ಯಾಕಾಂಡ ನಡೆಸಲು ಮೋದಿ ಯೋಜಿಸಿದ್ದಾರೆ(ModiPlanningFarmerGenocide) ಎಂಬ ಹ್ಯಾಶ್‌ಟ್ಯಾಗ್ ಮೂಲಕ ಟ್ವಿಟರ್‌ನಲ್ಲಿ ರೈತರ ಹೋರಾಟದ ಬಗ್ಗೆ ಟ್ವೀಟ್ ಮಾಡಿದ್ದ ಖಾತೆಗಳನ್ನು ನಿರ್ಬಂಧಿಸಲಾಗಿತ್ತು.



Join Whatsapp