ಉದ್ಯಮಿ ಜಾಬೀರ್ ಅತ್ತಾಸ್ ಅವರಿಗೆ ‘ಕಾಯಕ ಯೋಗಿ ಪ್ರಶಸ್ತಿ’

Prasthutha|

ಬೆಂಗಳೂರು: ಸಾಮಾಜಿಕ ಸೇವಾ ಕ್ಷೇತ್ರದಲ್ಲಿ ಸಾಧನೆಗೈದ  ಸಾಧಕರಿಗೆ ಕರ್ನಾಟಕ ರಾಜ್ಯ ಕಾರ್ಮಿಕ ಪರಿಷತ್ ಕೊಡಮಾಡುವ ಕಾಯಕಯೋಗಿ 2023 ರಾಜ್ಯ ಮಟ್ಟದ ಪ್ರಶಸ್ತಿಗೆ ಯುವನಾಯಕ ದಿಟ್ಟ ಕನ್ನಡಿಗ ಜಾಬೀರ್ ಆತ್ತಾಸ್ ಅವರು ಆಯ್ಕೆಯಾಗಿರುತ್ತಾರೆ.

- Advertisement -

ಕರ್ನಾಟಕ ರಾಜ್ಯ ಕಾರ್ಮಿಕ ಪರಿಷತ್ ಕಾರ್ಮಿಕ ಸಮ್ಮೇಳನ ಮತ್ತು ರಾಜ್ಯಾಧ್ಯಕ್ಷರಾದ ಡಾ. ರವಿಶೆಟ್ಟಿ ಬೈಂದೂರ್ ಅವರ ಜನ್ಮದಿನದ ಪ್ರಯುಕ್ತ ಈ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುವುದು. ಈ ಗೌರವಕ್ಕೆ ಅವರಿಗೆ ಸಂಸ್ಥೆಯು ಅಭಿನಂದನೆಯನ್ನು ತಿಳಿಸಿ, ಜು. 22 ರಂದು ರಾಜಾಜಿನಗರದ ಭೀಮರಾವ್ ಪ್ಯಾಲೇಸ್ ನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪುರಸ್ಕರಿಸಲಾಗುವುದು ಎಂದು ಪರಿಷತ್ ಪ್ರಕಟಣೆ ತಿಳಿಸಿದೆ.

ಕಡಬ ತಾಲೂಕು ಬೆಳಂದೂರು ಅತ್ತಾಸ್ ನಿವಾಸಿ ಅಬ್ದುಲ್ಲ ಹಾಗೂ ಕುಂಞಲಿಮ್ಮ ದಂಪತಿ ಪುತ್ರರಾದ ಇವರು ಬೆಂಗಳೂರಿನಲ್ಲಿ ಹೋಟೆಲ್ ಉದ್ಯಮಿಯಾಗಿದ್ದಾರೆ. ಕರ್ನಾಟಕ ರಾಜ್ಯ ಕಾರ್ಮಿಕ ಪರಿಷತ್ತಿನ ಅಲ್ಪಸಂಖ್ಯಾತ ವಿಭಾಗದ ರಾಜ್ಯಾಧ್ಯಕ್ಷರಾದ ಜಾಬೀರ್ ಅತ್ತಾಸ್,  ಪರಿಷತ್ತಿನ ಅಲ್ಪಸಂಖ್ಯಾತ ವಿಭಾಗದ ಬೆಂಗಳೂರು ನಗರ ಅಧ್ಯಕ್ಷರಾಗಿ, ರಾಜ್ಯ ಕಾರ್ಯಧ್ಯಕ್ಷರಾಗಿ ಉತ್ತಮ ಸೇವೆ ಸಲ್ಲಿಸಿದ್ದರು.