ಮಂಗಳೂರು: ಸೋಶಿಯಲ್ ಡೆಮೋಕ್ರಟಿಕ್ ಆಟೋ ಚಾಲಕರ ಯೂನಿಯನ್ ಮಂಗಳೂರು ನಗರ ಸಮಿತಿ ವತಿಯಿಂದ ಸ್ನೇಹ ಸಮ್ಮಿಲನ ಮತ್ತು ಇಫ್ತಾರ್ ಕೂಟ ಯೂನಿಯನ್ ನಗರ ಸಮಿತಿ ಅಧ್ಯಕ್ಷ ಇಲ್ಯಾಸ್ ಬೆಂಗರೆಯವರ ಅದ್ಯಕ್ಷತೆಯಲ್ಲಿ ಮಿನಿ ವಿಧಾನ ಸೌಧದ ಸಮೀಪವಿರುವ ಕರಾವಳಿ ಸಭಾ ಭವನದಲ್ಲಿ ಸೋಮವಾರ ನಡೆಯಿತು
ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದ ಹನೀಫ್ ಕಾಟಿಪಳ್ಳ, ಸಮಾಜ ಸೇವೆಯನ್ನು ಸೃಷ್ಟಿಕರ್ತನು ಹೆಚ್ಚು ಇಷ್ಟ ಪಡುತ್ತಾನೆ ಇನ್ನೊಬ್ಬರ ಸಂಕಷ್ಟದಲ್ಲಿ ನಾವು ಸಹಕರಿಸಿದರೆ ನಮ್ಮ ಸಮಸ್ಯೆಗಳಿಗೆ ಮತ್ತೊಬ್ಬರು ನೆರವಾಗುತ್ತಾರೆ ಇದನ್ನು ರಿಕ್ಷಾ ಚಾಲಕರು ಮೈಗೂಡಿಸಿಕೊಳ್ಳಬೇಕು ಎಂದರು
SDTU ರಾಜ್ಯ ಕಾರ್ಯದರ್ಶಿ ಖಾದರ್ ಫರಂಗಿಪೇಟೆ, SDPI ದಕ್ಷಿಣ ಕ್ಷೇತ್ರ ಅಧ್ಯಕ್ಷ ಅಕ್ಬರ್ ಕುದ್ರೋಳಿ, SDTU ಉಡುಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಉಸ್ತಾದ್ ಈ ಸಂದರ್ಭದಲ್ಲಿ ಮಾತನಾಡಿದರು, SDPI ದಕ್ಷಿಣ ಕ್ಷೇತ್ರ ಸಮಿತಿ ಕಾರ್ಯದರ್ಶಿ ಅಶ್ಫಾಕ್ ಉಲ್ಲಾಳ, SDTU ಮಂಗಳೂರು ದಕ್ಷಿಣ ಕ್ಷೇತ್ರ ಕಾರ್ಯದರ್ಶಿ ಅನ್ಸಾರ್ ಕುದ್ರೋಳಿ, ಸಲಾಹುದ್ದಿನ್ ಮತ್ತಿತರರು ಉಪಸ್ಥಿತರಿದ್ದರು.
ಮುಸ್ತಫಾ ಪಾರ್ಲಿಯಾ ಸ್ವಾಗತಿಸಿ ನಿರೂಪಿಸಿದರು