ಗೋ‌ಮೂತ್ರದಿಂದ ಸೋಪು-ಶಾಂಪು, ಸೆಗಣಿಯಿಂದ ಆಯಿಲ್ ಪೇಂಟ್ ತಯಾರಿಕೆ: ಪ್ರಭು ಚವ್ಹಾಣ್

Prasthutha|

ಬೆಂಗಳೂರು: ಗೋ‌ಮೂತ್ರದಿಂದ ಸೋಪು, ಶಾಂಪು ತಯಾರಿಕೆ, ಸೆಗಣಿಯಿಂದ ಆಯಿಲ್ ಪೇಂಟ್ ತಯಾರಿ ಮಾಡುವ ಬಗ್ಗೆ ನಾವು ಚರ್ಚೆ ನಡೆಸಿದ್ದೇವೆ ಎಂದು ಪಶುಸಂಗೋಪನ ಸಚಿವ ಪ್ರಭು ಚವ್ಹಾಣ್ ಹೇಳಿದರು.

- Advertisement -

ಈ ಬಗ್ಗೆ ವಿಕಾಸಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಸ್ತುತ 19 ಜಿಲ್ಲೆಗಳಲ್ಲಿ ಗೋಶಾಲೆ ನಿರ್ಮಾಣಕ್ಕೆ ಪೂರ್ವ ಸಿದ್ಧತೆಗಳು ನಡೆದಿವೆ. ಪ್ರತಿ ಜಿಲ್ಲೆಯಲ್ಲಿ 50,100 ಎಕರೆ ವಿಸ್ತೀರ್ಣದ ಗೋಶಾಲೆ ಮಾಡಲಾಗುತ್ತದೆ. ಒಂದು ಗೋ ಶಾಲೆಗೆ 2 ಕೋಟಿ ರೂ. ಬೇಕು. ಸರ್ಕಾರ ಒಂದು ಗೋಶಾಲೆಗೆ 50 ಲಕ್ಷ ರೂ. ಇಟ್ಟಿದೆ. ಈಗಾಗಲೇ 26 ಲಕ್ಷ ಹಣ ಬಿಡುಗಡೆಯಾಗಿದೆ. ಕೆಲಸ ನೋಡಿ ಉಳಿದ ಹಣ ಬಿಡುಗಡೆ ಮಾಡುತ್ತೇವೆ ಎಂದರು.



Join Whatsapp