ಬ್ಯಾಂಕಾಕ್: ಬ್ಕಾಂಕ್‌ನಿಂದ ಫುಕೆಟ್‌ಗೆ ಪ್ರಯಾಣಿಸುತ್ತಿದ್ದ ವಿಮಾನದಲ್ಲಿ ಇದ್ದಕ್ಕಿದ್ದಂತೆ ಹಾವು ಕಾಣಿಸಿಕೊಂಡಿದೆ. ಪ್ರಯಾಣಿಕರು ತಮ್ಮ ಸಣ್ಣಪುಟ್ಟ ಲಗೇಜ್ ಇಡುವ ಮೇಲಿನ ಕ್ಯಾಬಿನ್ನಲ್ಲಿ ಹಾವು ಕಾಣಿಸಿಕೊಂಡಿದ್ದು, ಹಾವನನ್ನು ಸೆರೆಹಿಡಿದು ಪ್ರಯಾಣಿಕರನ್ನು ರಕ್ಷಿಸಲಾಗಿದೆ.
ವಿಮಾನ ಟೇಕ್ ಆಫ್ ಆಗುತ್ತಿರುವಾಗಲೇ ಸಿಬ್ಬಂದಿ ಅದನ್ನು ಪ್ಲಾಸ್ಟಿಕ್ ಬಾಟಲಿಯಲ್ಲಿ ಸೆರೆ ಹಿಡಿದಿದ್ದಾರೆ. ವಿಮಾನ ಲ್ಯಾಂಡ್ ಆದ ಕೂಡಲೇ ಹೆಚ್ಚಿನ ಪರಾಮರ್ಷೆ ಮಾಡಿದಾಗ ಆ ಹಾವು ವಿಷಕಾರಿಯಲ್ಲ ಎಂದು ಸ್ಪಷ್ಟವಾಗಿದ್ದು, ಪ್ರಿಯಾಣಿಕರಿಗೆ ಮಾಹಿತಿ ನೀಡಿದ್ದಾರೆ.
ವಿಮಾನ ಹೊರಡುವ ಮೊದಲು ಫುಕೆಟ್ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಕ್ಯಾರಿ-ಆನ್ ಲಗೇಜ್ ಅನ್ನು ಸಂಪೂರ್ಣವಾಗಿ ಪರಿಶೀಲಿಸಲಾಗಿತ್ತು. ಆದರೂ ಹಾವು ಹೇಗೆ ಒಳಗೆ ನುಸುಳಿ ಬಂದಿತ್ತು ಎಂಬುದು ನಿಗೂಢವಾಗಿದೆ.
ಈ ವಿಡಿಯೋವನ್ನು ತನ್ನ ಫೋನ್‌ನಲ್ಲಿ ಆ ಪ್ರಯಾಣಿಕ ತೆಗೆದಿರಿಸಿಕೊಂಡಿದ್ದಾರೆ. ಅದನ್ನು ತಮ್ಮ ವೈಯಕ್ತಿಕ ರೀಲ್ಸ್ ಖಾತೆಯೊಂದಿಗೆ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.