ಗೋವಾ ಅಕ್ರಮ ಬಾರ್ ವಿವಾದ: ಕಾಂಗ್ರೆಸ್ ನಾಯಕರಿಗೆ ಲೀಗಲ್ ನೋಟಿಸ್ ಕಳುಹಿಸಿದ ಸ್ಮೃತಿ ಇರಾನಿ

Prasthutha|

ನವದೆಹಲಿ: ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರ ಪುತ್ರಿ ಗೋವಾದಲ್ಲಿ ‘ಅಕ್ರಮ ಬಾರ್’ ನಡೆಸುತ್ತಿದ್ದಾರೆ ಎಂದು ಆರೋಪಿಸಿರುವ ಕಾಂಗ್ರೆಸ್ ನಾಯಕರು ಮತ್ತು ಕಾಂಗ್ರೆಸ್ ಪಕ್ಷದ ವಿರುದ್ಧ ಸಚಿವೆ ಸ್ಮೃತಿ ಇರಾನಿ ಲೀಗಲ್ ನೋಟಿಸ್ ಕಳುಹಿಸಿದ್ದಾರೆ.

- Advertisement -

ವಿರೋಧ ಪಕ್ಷದ ಜೈರಾಮ್ ರಮೇಶ್, ಪವನ್ ಖೇರಾ ಮತ್ತು ನೆಟ್ಟಾ ಡಿಸೋಜಾ ಅವರಿಗೆ ಲೀಗಲ್ ನೋಟಿಸ್ ಕಳುಹಿಸಲಾಗಿದ್ದು, ಲಿಖಿತವಾಗಿ ಕ್ಷಮೆಯಾಚಿಸಲು ಮತ್ತು ಕಾಂಗ್ರೆಸ್ ನಿಂದ ತಕ್ಷಣದಿಂದ ಜಾರಿಗೆ ಬರುವಂತೆ ಮಗಳ ಮೇಲಿನ ಆರೋಪಗಳನ್ನು ಹಿಂಪಡೆಯುವಂತೆ ಕೇಂದ್ರ ಸಚಿವೆ ಕೋರಿದ್ದಾರೆ.

ಇವು ಸಚಿವೆಯ ಪ್ರತಿಷ್ಠೆಗೆ ಧಕ್ಕೆ ಉಂಟುಮಾಡಲು ಸೃಷ್ಟಿಸಿರುವ ಸುಳ್ಳು ಆರೋಪಗಳಾಗಿದ್ದು, ಸಚಿವೆ ಮತ್ತು ಅವರ ಮಗಳ ನಮ್ರತೆಗೆ ಆಕ್ರೋಶವನ್ನುಂಟುಮಾಡುವ ಉದ್ದೇಶದಿಂದ ಆರೋಪಿಸಲಾಗಿದೆ ಎಂದು ಲೀಗಲ್ ನೋಟಿಸ್ ನಲ್ಲಿ ಹೇಳಲಾಗಿದೆ. ಸಚಿವರ ಪುತ್ರಿ ಜೊಯಿಶ್ ಇರಾನಿ ಅವರು ಗೋವಾದಲ್ಲಿ ಬಾರ್ ನಡೆಸುವಲ್ಲಿ ಎಂದಿಗೂ ಭಾಗಿಯಾಗಿಲ್ಲ ಎಂದು ನೋಟಿಸ್ ದೃಢಪಡಿಸಿದೆ.



Join Whatsapp