ಮಂಗಳೂರು | ಮನೆ ಅಂಗಳದಲ್ಲಿ ಅಸ್ಥಿಪಂಜರ ಪತ್ತೆ: ಪೋಲಿಸರಿಂದ ಸ್ಥಳ ಪರಿಶೀಲನೆ

Prasthutha|

ಮಂಗಳೂರು: ಜನವಾಸವಿಲ್ಲದ ಮನೆಯ ಅಂಗಳದಲ್ಲಿ ವ್ಯಕ್ತಿಯೊಬ್ಬರ ಅಸ್ಥಿಪಂಜರ ಪತ್ತೆಯಾಗಿರುವ ಘಟನೆ ಬರ್ಕೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

- Advertisement -


ಮಣ್ಣಗುಡ್ಡೆಯ ಹೋಟೆಲ್ ದುರ್ಗಮಹಲ್ ಮುಂಭಾಗದ ರಸ್ತೆ ಸಮೀಪದ ಜನವಾಸವಿಲ್ಲದ ಮನೆಯ ಅಂಗಳದಲ್ಲಿ ಅಸ್ಥಿಪಂಜರ ಪತ್ತೆಯಾಗಿರುವುದಾಗಿ ಸ್ಥಳೀಯರು ಪೊಲೀಸರಿಗೆ ತಿಳಿಸಿದ್ದಾರೆ.


ಮಾಹಿತಿ ತಿಳಿದ ತಕ್ಷಣ ಬರ್ಕೆ ಠಾಣಾ ಪೋಲಿಸರು ಸ್ಥಳಕ್ಕೆ ಆಗಮಿಸಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.

Join Whatsapp