ಆರು ವರ್ಷದ ವಿದ್ಯಾರ್ಥಿಯನ್ನು ಶಾಲೆಯಲ್ಲೇ ಬಿಟ್ಟು ಬೀಗ ಜಡಿದ ಸಿಬ್ಬಂದಿ: ಮುಖ್ಯೋಪಾಧ್ಯಾಯ ಸೇರಿ ಎಲ್ಲಾ ಉದ್ಯೋಗಿಗಳ ಅಮಾನತು

Prasthutha|

ಲಕ್ನೋ: ಜವಾನನ ನಿರ್ಲಕ್ಷ್ಯದಿಂದಾಗಿ ಆರು ವರ್ಷದ ವಿದ್ಯಾರ್ಥಿಯನ್ನು ತರಗತಿಯಲ್ಲೇ ಬಿಟ್ಟು ಶಾಲೆಗೆ ಬೀಗ ಹಾಕಿದ್ದಕ್ಕಾಗಿ ಶಾಲಾ ಮುಖ್ಯೋಪಾಧ್ಯಾಯರು ಸೇರಿದಂತೆ ಶಾಲೆಯ ಸಂಪೂರ್ಣ ಸಿಬ್ಬಂದಿಯನ್ನು ಸ್ಥಳೀಯ ಶಿಕ್ಷಣ ಅಧಿಕಾರಿಗಳು ಅಮಾನತುಗೊಳಿಸಿರುವ ಘಟನೆ ಉತ್ತರ ಪ್ರದೇಶದ ಬುಲಂದ್ ಶಹರ್ ಜಿಲ್ಲೆಯಲ್ಲಿ ನಡೆದಿದೆ.

- Advertisement -

ಇಲ್ಲಿನ ಗುಲಾವತಿ ಡೆವಲಪ್ ಮೆಂಟ್ ಬ್ಲಾಕ್ ನ ಸರ್ಕಾರಿ ಶಾಲೆಯಲ್ಲಿ ಈ ಘಟನೆ ನಡೆದಿದೆ.

ಎಲ್ಲಾ ಶಿಕ್ಷಕರು ಗುಲಾವತಿಯ ಡೆವಲಪ್ ಮೆಂಟ್ ಬ್ಲಾಕ್ ಪ್ರಧಾನ ಕಚೇರಿಯಲ್ಲಿ ಶಿಕ್ಷಕರ ಸಂಘದ ಚುನಾವಣೆಯಲ್ಲಿ ಭಾಗವಹಿಸಲು ಹೋಗಿದ್ದರು. ಶಾಲೆಯ ಮುಖ್ಯೋಪಾಧ್ಯಾಯಿನಿ ರೇಶಮ್ ಪಾಲ್ ಅವರು ಶಿಕ್ಷಕರೊಂದಿಗೆ ಹೋಗದೆ ಶಾಲೆಯಲ್ಲಿಯೇ ಉಳಿದಿದ್ದರು.

- Advertisement -

ಆದರೆ ಶಾಲೆಯನ್ನು ಮುಚ್ಚುವ ಮೊದಲೇ ಮಕ್ಕಳ ಜವಾಬ್ದಾರಿಯನ್ನು ಜವಾನನಿಗೆ ಒಪ್ಪಿಸಿ ಮುಖ್ಯೋಪಾಧ್ಯಾಯರು ಹೋಗಿದ್ದರು ಎನ್ನಲಾಗಿದೆ. ಜವಾನನು ಮನೆಗೆ ಹೋಗುವ ಅವಸರದಲ್ಲಿ ನಿದ್ರೆಗೆ ಜಾರಿದ ಬಾಲಕಿಯನ್ನು ನೋಡದೆ ತರಗತಿಯನ್ನು ಸರಿಯಾಗಿ ಪರಿಶೀಲಿಸದೆ ಕೋಣೆಗಳನ್ನು ಮುಚ್ಚಿ ಶಾಲೆಗೆ ಬೀಗ ಹಾಕಿ ಹೊರಟುಹೋಗಿದ್ದಾನೆ.

ಬಾಲಕಿ ಶಾಲೆಯಿಂದ ಮನೆಗೆ ತಲುಪದಿದ್ದಾಗ ಕಳವಳಗೊಂಡ ಕುಟುಂಬಸ್ಥರು ಅವಳನ್ನು ಹುಡುಕಿ ಶಾಲೆಗೆ ಬಂದಿದ್ದಾರೆ. ಶಾಲೆಯಲ್ಲಿ ಬಾಲಕಿಯು  ತರಗತಿಯ ಒಳಗೆ ಅಳುವುದನ್ನು ಕೇಳಿ ಕುಟುಂಬಸ್ಥರು ಸೇರಿದಂತೆ ಗ್ರಾಮಸ್ಥರು ಬೀಗ ಮುರಿದು ಬಾಲಕಿಯನ್ನು ಶಾಲೆಯಿಂದ ಹೊರಗೆ ಕರೆದೊಯ್ದರು ಎಂದು ತಿಳಿದು ಬಂದಿದೆ.

ಶಾಲೆಯವರ ನಿರ್ಲಕ್ಷ್ಯದಿಂದಾಗಿ ಈ ಘಟನೆ ನಡೆದಿದೆ ಎಂದು ಆರೋಪಿಸಿ ಮುಖ್ಯೋಪಾಧ್ಯಾಯರು ಎಲ್ಲಾ ಶಾಲಾ ಸಿಬ್ಬಂದಿಯನ್ನು  ಅಮಾನತುಗೊಳಿಸಲಾಗಿದೆ ಎಂದು ಮೂಲ ಶಿಕ್ಷಾ ಅಧಿಕಾರಿ (ಬಿಎಸ್ಎ) ಬಿ.ಕೆ.ಶರ್ಮಾ ಹೇಳಿದ್ದಾರೆ.




Join Whatsapp