ಹಾಸ್ಟೆಲ್ ನ ಕಿಟಕಿ ಮುರಿದು ಆರು ಬಾಲಕಿಯರು ಪರಾರಿ

Prasthutha|

ಮುಂಬೈ: ಸರ್ಕಾರಿ ಬಾಲಕಿಯರ ವಸತಿ ನಿಲಯದ ಶೌಚಾಲಯದ  ಕಿಟಕಿಯ ಗ್ರಿಲ್ ಮುರಿದು ಆರು ಅಪ್ರಾಪ್ತ ಬಾಲಕಿಯರು ಪರಾರಿಯಾಗಿರುವ ಘಟನೆ ಮುಂಬೈನ ಗೋವಂದಿಯಲ್ಲಿ ನಡೆದಿದೆ.

- Advertisement -

ಭಾನುವಾರ ಮುಂಜಾನೆ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ತಪ್ಪಿಸಿಕೊಳ್ಳುವ ಮೊದಲು ಹಾಸ್ಟೆಲ್ ನ ವಾರ್ಡನ್ ರೂಂ ಅನ್ನು ಲಾಕ್ ಮಾಡಿ ಎಸ್ಕೇಪ್ ಆಗಿದ್ದಾರೆ ಎನ್ನಲಾಗಿದೆ.

ಬಾಲಕಿಯರಿಗೆ ಪರಾರಿಯಾಗಲು ಯಾರೋ ಸಹಾಯ ಮಾಡಿರುವ ಶಂಕೆ ವ್ಯಕ್ತವಾಗಿದ್ದು, ಈ ಕುರಿತು ಅಪರಿಚಿತ ವ್ಯಕ್ತಿಗಳ ಮೇಲೆ ಕೇಸ್ ದಾಖಲಾಗಿದೆ.

- Advertisement -

ಆರು ಬಾಲಕಿಯರು ಅಪ್ರಾಪ್ತರಾಗಿದ್ದು, ಈ ರೀತಿ ಹಾಸ್ಟೆಲ್ ನಿಂದ ಪರಾರಿಯಾಗಲು ಕಾರಣ ಏನು ಎಂಬುದು ಇನ್ನೂ ನಿಗೂಢವಾಗಿದೆ.ಈ ಕುರಿತು ಸಿಸಿಟಿವಿ ದೃಶ್ಯ ಆಧರಿಸಿ ಸ್ಥಳೀಯ ಪೊಲೀಸರು ಶೋಧ ಕಾರ್ಯ ಆರಂಭಿಸಿದ್ದಾರೆ.



Join Whatsapp