ಮುಂಬೈ: ಅಜಿತ್ ಪವಾರ್ ಪಕ್ಕ ಕುಳಿತರೆ ವಾಂತಿ ಬರುತ್ತೆ ಎಂದು ಸಚಿವ ತಾನಾಜಿ ಸಾವಂತ್ ಹೇಳಿದ್ದಾರೆ.
ಮುಂಬರುವ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಎಲ್ಲಾ ರಾಜಕೀಯ ಪಕ್ಷಗಳು ಒಗ್ಗಟ್ಟಾಗಿದ್ದೇವೆ ಎಂದು ತೋರಿಸುತ್ತಿವೆ, ಆದರೆ ಮಹಾಮೈತ್ರಿಕೂಟದಲ್ಲಿನ ಬಿರುಕು ಮತ್ತೊಮ್ಮೆ ಗೋಚರಿಸುತ್ತದೆ.
ಎನ್ ಸಿಪಿ (ಅಜಿತ್ ಪವಾರ್) ಪಕ್ಷಕ್ಕೆ ಸಂಬಂಧಿಸಿದಂತೆ ಆರೋಗ್ಯ ಸಚಿವ ತಾನಾಜಿ ಸಾವಂತ್ ಹೇಳಿಕೆಯಿಂದಾಗಿ ರಾಜಕೀಯ ವಲಯದಲ್ಲಿ ಮತ್ತೊಂದು ಚರ್ಚೆ ಹುಟ್ಟಿಕೊಂಡಿದೆ.
ಮೊದಲಿನಿಂದಲೇ ತಾನಾಜಿಗೆ ಎನ್ ಸಿಪಿ ಕಂಡರೆ ಅಷ್ಟಕ್ಕಷ್ಟೆ, ಒಂದೊಮ್ಮೆ ಅಜಿತ್ ಪವಾರ್ ಪಕ್ಕ ಕುಳಿತರೆ ವಾಂತಿ ಬರುವುದು ಕಂಡಿತ ಎಂದು ಹೇಳಿ ವಿವಾದ ಸೃಷ್ಟಿಸಿದ್ದಾರೆ.
ನಾನು ಶಿವಸೇನೆಯ ಸೈನಿಕ ಎಂದೂ ಕಾಂಗ್ರೆಸ್ ಅಥವಾ ಎನ್ಸಿಪಿಯೊಂದಿಗೆ ಹೊಂದಾಣಿಕೆ ಮಾಡಿಕೊಂಡಿಲ್ಲ. ನಾವು ನಮ್ಮ ತತ್ವಗಳಿಗೆ ಬದ್ಧರಾಗಿದ್ದೇವೆ.
ಕ್ಯಾಬಿನೆಟ್ ನಲ್ಲಿ ಒಟ್ಟಿಗೆ ಕುಳಿತರೂ, ಹೊರಗೆ ಕಾಲಿಟ್ಟ ತಕ್ಷಣ ವಾಕರಿಕೆ ಬರುವುದು ಸಹಿಸಲಾಗದ ಸಂಗತಿ. ತಾನಾಜಿ ಸಾವಂತ್ ಅವರ ಇತ್ತೀಚಿನ ಹೇಳಿಕೆಗಳು ಮಹಾ ವಿಕಾಸ್ ಅಘಾಡಿ ಒಕ್ಕೂಟದೊಳಗೆ ಮಹತ್ವದ ವಿವಾದದ ಕಳವಳವನ್ನು ಹುಟ್ಟುಹಾಕಿದೆ.