ಸೀತಾರಾಂ ಯೆಚೂರಿ ಮೃತದೇಹವನ್ನು ಏಮ್ಸ್’ಗೆ ದಾನ ಮಾಡಿದ ಕುಟುಂಬಸ್ಥರು

Prasthutha|

ನವದೆಹಲಿ: ಸಿಪಿಐಎಂ ಹಿರಿಯ ನಾಯಕ ಸೀತಾರಾಂ ಯೆಚೂರಿ ಮೃತದೇಹವನ್ನು ಅವರ ಕುಟುಂಬಸ್ಥರು ಬೋಧನೆ ಮತ್ತು ಸಂಶೋಧನಾ ಉದ್ದೇಶಗಳಿಗಾಗಿ ನವದೆಹಲಿಯ ಆಲ್ ಇಂಡಿಯಾ ಇನ್ ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (AIIMS)ಗೆ ದಾನ ಮಾಡಿದ್ದಾರೆ.

- Advertisement -


72 ವರ್ಷದ ಸೀತಾರಾಂ ಯೆಚೂರಿ ಅವರು ತೀವ್ರ ಉಸಿರಾಟದ ಸೋಂಕಿನಿಂದ ಬಳಲುತ್ತಿದ್ದರು. ಗುರುವಾರ ಮಧ್ಯಾಹ್ನ 3.05ಕ್ಕೆ ಅವರು ನಿಧನರಾದರು. ಟೀಚಿಂಗ್ ಮತ್ತು ಸಂಶೋಧನಾ ಉದ್ದೇಶಗಳಿಗಾಗಿ ಸೀತಾರಾಂ ಯೆಚೂರಿ ಅವರ ಕುಟುಂಬವು ಮೃತದೇಹವನ್ನು ನವದೆಹಲಿಯ AIIMSಗೆ ದಾನ ಮಾಡಿದೆ ಎಂದು ಏಮ್ಸ್ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.


ಸೀತಾರಾಂ ಯೆಚೂರಿ ಅವರು 2005ರಿಂದ 2017ರವರೆಗೆ 12 ವರ್ಷಗಳ ಕಾಲ ರಾಜ್ಯಸಭಾ ಸಂಸದರಾಗಿ ಸೇವೆ ಸಲ್ಲಿಸಿದರು. ಅವರು ಏಪ್ರಿಲ್ 19, 2015ರಂದು ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿಯಾದರು.



Join Whatsapp