“ಮಾದರಿ ನೀತಿ ಸಂಹಿತೆಗೆ ಪ್ರಸ್ತಾವಿತ  ತಿದ್ದುಪಡಿ ಅನಗತ್ಯ, ಅನಪೇಕ್ಷಣೀಯ”: ಚುನಾವಣಾ ಆಯೋಗಕ್ಕೆ ಪತ್ರ ಬರೆದ ಸೀತಾರಾಂ ಯೆಚೂರಿ

Prasthutha|

ನವದೆಹಲಿ: ಮಾದರಿ ನೀತಿ ಸಂಹಿತೆಗೆ ಪ್ರಸ್ತಾವಿತ  ತಿದ್ದುಪಡಿ ಅನಗತ್ಯವೂ ಆಗಿದೆ, ಅನಪೇಕ್ಷಣೀಯವೂ ಆಗಿದೆ ಎಂದು ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್ ವಾದಿ)-ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚುರಿ ಮುಖ್ಯ ಚುನಾವಣಾ ಆಯುಕ್ತರಿಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ.

- Advertisement -

 ಚುನಾವಣಾ ಆಶ್ವಾಸನೆಗಳ ವಿವರಗಳು ಮತ್ತು ಅವುಗಳ ಹಣಕಾಸು ಪರಿಣಾಮಗಳ ವಿವರಗಳನ್ನು ಬಹಿರಂಗಪಡಿಸಲು ಮಾದರಿ ನೀತಿ ಸಂಹಿತೆಯ ಪ್ರಸ್ತಾವಿತ ತಿದ್ದುಪಡಿ ಮತ್ತು ಪ್ರಪತ್ರವನ್ನು ಕಳಿಸಿರುವ ಭಾರತದ ಚುನಾವಣಾ ಆಯೋಗದ ಪತ್ರಕ್ಕೆ ಉತ್ತರವಾಗಿ ಅವರು ಅಕ್ಟೋಬರ್ 14 ರಂದು ಬರೆದಿರುವ ಪತ್ರದಲ್ಲಿ ಇದಕ್ಕೆ ನಾಲ್ಕು ಕಾರಣಗಳನ್ನು ಕೊಡುತ್ತ  ಪ್ರಸ್ತಾವಿತ ತಿದ್ದುಪಡಿಯನ್ನು ಹಿಂಪಡೆಯುವಂತೆ ಆಗ್ರಹಿಸಿದ್ದಾರೆ.

ಇದು ಆಯೋಗವು ತನ್ನ ವ್ಯಾಪ್ತಿಗೆ ಬರದ ರಾಜಕೀಯ ಮತ್ತು ನೀತಿ ವಿಷಯಗಳಲ್ಲಿ ತೊಡಗುವಂತೆ ಮಾಡುತ್ತದೆ; ಇವು ರಾಜಕೀಯ ಮತ್ತು ನೀತಿಯ ಪ್ರಶ್ನೆಗಳು; ಇದು ಆಯೋಗವು ತೆಗೆದುಕೊಂಡ ಒಂದು ಸರಿಯಾದ ಮತ್ತು ಮಾನ್ಯ ನಿಲುವಿನ ವಿಷಯದಲ್ಲಿ ಆಯೋಗವು ಮನಸ್ಸು ಬದಲಿಸಿದಂತೆ ತೋರುತ್ತಿರುವ, ರಾಜಕೀಯ ಪಕ್ಷಗಳು ಮತ್ತು ಜನರಿಗೆ ಸಂಬಂಧಿಸಿದ ಕ್ಷೇತ್ರದಲ್ಲಿ ಹೆಚ್ಚು ಅತಿಕ್ರಮಿಸುವ ಪ್ರಸ್ತಾವವಾಗಿದೆ. ಕೊನೆಯದಾಗಿ, ಈ ವಿಷಯವನ್ನು ಕುರಿತಂತೆ ಅರ್ಜಿಯ ವಿಚಾರಣೆಯನ್ನು ಮೂವರು ನ್ಯಾಯಾಧೀಶರ ಪೀಠಕ್ಕೆ ಒಪ್ಪಿಸಲು ದೇಶದ ಸುಪ್ರಿಂ ಕೋರ್ಟ್ ಈಗಾಗಲೇ ನಿರ್ಧರಿಸಿದೆ ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ.



Join Whatsapp