ಗುಜರಾತ್ ಗಲಭೆಯಲ್ಲಿ ಮೋದಿಗೆ ಕ್ಲೀನ್ ಚಿಟ್ ನೀಡಿದ SIT | ಸುಪ್ರೀಂ ಕೋರ್ಟ್ ವಿಚಾರಣೆ

Prasthutha|

2002 ರ ಗುಜರಾತ್ ಗಲಭೆಗೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿಯವರಿಗೆ SIT (ವಿಶೇಷ ತನಿಖಾ ತಂಡ) ಕ್ಲೀನ್ ಚಿಟ್ ನೀಡಿದ್ದು , ಈ ಬಗ್ಗೆ ಸುಪ್ರೀಂ ಕೋರ್ಟ್ ಏಪ್ರಿಲ್ 13 ರಂದು ವಿಚಾರಣೆ ನಡೆಸಲಿದೆ.

- Advertisement -

ಫೆಬ್ರವರಿ 28, 2002 ರಂದು ಅಹಮದಾಬಾದ್‌ನ ಗುಲ್ಬರ್ಗ್ ಸೊಸೈಟಿಯಲ್ಲಿ ಕಾಂಗ್ರೆಸ್ ಶಾಸಕ ಎಹ್ಸಾನ್ ಜಾಫ್ರಿ ಸೇರಿ 68 ಜನರು ಕೊಲ್ಲಲ್ಪಟ್ಟಿದ್ದರು . ಈ ಪ್ರಕರಣದಲ್ಲಿ ಎಹ್ಸಾನ್ ಜಾಫ್ರಿಯವರ ಪತ್ನಿ  ಜಾಕಿಯಾ ಜಾಫ್ರಿ ಸಲ್ಲಿಸಿದ್ದ ಮನವಿಯನ್ನು ಏಪ್ರಿಲ್ 13 ರಂದು ಮೇಲ್ವಿಚಾರಣೆ ನಡೆಸಲಾಗುವುದು ಎಂದು ಮಾಧ್ಯಮಗಳು ತಿಳಿಸಿವೆ.

ಈ ಹಿಂದೆ SIT ಯು ಮೋದಿ ಮತ್ತು ಹಿರಿಯ ಸರ್ಕಾರಿ ಅಧಿಕಾರಿಗಳು ಸೇರಿದಂತೆ 63 ಜನರಿಗೆ ಕ್ಲೀನ್ ಚಿಟ್ ನೀಡಿ ಪ್ರಕರಣವನ್ನು ಮುಚ್ಚುವ ವರದಿಯನ್ನು ಸಲ್ಲಿಸಿತ್ತು ಮತ್ತು ಅವರ ವಿರುದ್ಧ “ಯಾವುದೇ ಕಾನೂನು ಕ್ರಮಗಳಿಲ್ಲ” ಎಂದು ಹೇಳಿತ್ತು. ಆದರೆ ಇದರ ವಿರುದ್ಧ ಜಾಫ್ರೀ ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದರು. ಎಸ್‌ಐಟಿಯ ನಿರ್ಧಾರದ ವಿರುದ್ಧ  ಜಾಫ್ರೀ ಸಲ್ಲಿಸಿದ್ದ ಮನವಿಯನ್ನು ಗುಜರಾತ್ ಹೈಕೋರ್ಟ್‌ನ ತಿರಸ್ಕರಿಸಿತ್ತು.  ಈ ಆದೇಶವನ್ನು ಪ್ರಶ್ನಿಸಿ ಜಾಕಿಯಾ ಜಾಫ್ರಿ 2018 ರಲ್ಲಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು ಎನ್ನಲಾಗಿದೆ.



Join Whatsapp