15 ಮಂದಿ ವಿರುದ್ಧ ಪ್ರಕರಣಕ್ಕೆ ಪ್ರಧಾನಿ ಸೂಚನೆ : ಸಿಸೋಡಿಯ ಆರೋಪ

Prasthutha|

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು 15 ಮಂದಿಯ ವಿರುದ್ಧ ಪ್ರಕರಣ ದಾಖಲಿಸಲು ಕೇಂದ್ರ ಏಜೆನ್ಸಿಗೆ ಸೂಚಿಸಿದ್ದಾರೆ ಎಂದು ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯ ಆರೋಪಿಸಿದ್ದಾರೆ.

- Advertisement -

ದೆಹಲಿ ಪೊಲೀಸ್, ಸಿಬಿಐ ಮತ್ತು ಇಡಿ ಇಲಾಖೆಗೆ ಆ ಹೆಸರನ್ನು ರವಾನಿಸಿ ಅವರ ವಿರುದ್ಧ ದಾಳಿ ನಡೆಸಿ ಪ್ರಕರಣವನ್ನು ದಾಖಲಿಸುವಂತೆ ಸೂಚಿಸಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಪ್ರಧಾನಿ ಮೋದಿ ತನಿಖಾ ಸಂಸ್ಥೆಗಳಿಗೆ ರವಾನಿಸಿರುವ ಹೆಸರಿನ ಪಟ್ಟಿಯಲ್ಲಿರುವ ಬಹುತೇಕ ಹೆಸರುಗಳು ಆಮ್ ಪಕ್ಷಗಳಿಗೆ ಸಂಬಂಧಿಸಿದೆಯೆಂದು ಅವರು ಆರೋಪಿಸಿದ್ದಾರೆ . ಸಿಸೋಡಿಯ ಅವರ ಆರೋಪದ ಕುರಿತು ಪ್ರತಿಕ್ರಿಯೆ ನೀಡಲು ಬಿಜೆಪಿ ಅಥವಾ ಒಕ್ಕೂಟ ಸರ್ಕಾರ ನಿರಾಕರಿಸಿದೆ.

- Advertisement -

ಮುಂದಿನ ಚುನಾವಣೆಗೂ ಮುನ್ನ 15 ಮಂದಿಯ ವಿರುದ್ಧ ದಾಳಿ ನಡೆಸಿ ಎಫ್.ಐ.ಆರ್ ದಾಖಲಿಸುವಂತೆ ಸಿಬಿಐ,ಇಡಿ ಮತ್ತು ದೆಹಲಿ ಪೊಲೀಸರಿಗೆ ಪ್ರಧಾನಿ ಸೂಚಿಸಿದ್ದಾರೆಂದು ನಂಬಲರ್ಹ ಮೂಲಗಳು ಬಹಿರಂಗಪಡಿಸಿವೆ. ಮಾತ್ರವಲ್ಲದೆ ದೆಹಲಿ ಪೊಲೀಸ್ ಆಯುಕ್ತ ರಾಕೇಶ್ ಅಸ್ಥಾನಾ ಅವರು ಮೋದಿ ಪರ ಕೆಲಸ ನಿರ್ವಹಿಸುತ್ತಿದ್ದಾರೆಂದು ಸಿಸೋಡಿಯಾ ಅವರು ಆರೋಪಿಸಿದ್ದಾರೆ

ಸಿಬಿಐ, ಇಡಿ ಮತ್ತು ಪೊಲೀಸ್ ವ್ಯವಸ್ಥೆಯನ್ನು ನಮ್ಮ ವಿರುದ್ಧ ದುರ್ಬಳಕೆ ಮಾಡುತ್ತಿರುವ ಕ್ರಮವನ್ನು ನಾವು ಸ್ವಾಗತಿಸುತ್ತೇವೆ. ಆಮ್ ಆದ್ಮಿ ಸತ್ಯ ಮತ್ತು ಪ್ರಾಮಾಣಿಕತೆಯ ರಾಜಕೀಯ ಮಾಡುತ್ತದೆ ಎಂದು ಸಿಸೋಡಿಯ ಪುನರುಚ್ಚರಿಸಿದರು.

Join Whatsapp