SIO ದ.ಕ ಜಿಲ್ಲೆ ವತಿಯಿಂದ ಡಿ. 21 ರಿಂದ 24 ರವರೆಗೆ ರಥಯಾತ್ರೆ

Prasthutha|

ಮಂಗಳೂರು: SIO ದ.ಕ ಜಿಲ್ಲೆ ವತಿಯಿಂದ ಡಿ. 21 ರಿಂದ 24 ರವರೆಗೆ ರಥಯಾತ್ರೆ ನಡೆಯಲಿದೆ ಎಂದು SIO ದ.ಕ ಜಿಲ್ಲೆ ಹೇಳಿದೆ.

- Advertisement -

ಈ ಬಗ್ಗೆ ಪತ್ರಿಕೆ ಹೇಳಿಕೆ ಬಿಡುಗಡೆ ಮಾಡಿರುವ ಎಸ್ ಐಓ, ದ್ವೇಷ ಭಾಷಣ ಇಂದು ನಮ್ಮ ಭಾರತದಲ್ಲಿ ದಿನನಿತ್ಯದ ಸಾಮಾನ್ಯ ವಿಷಯವಾಗಿದೆ ಮತ್ತು ದೇಶದ ವಿವಿಧ ಪ್ರದೇಶಗಳಲ್ಲಿ ದ್ವೇಷದ ಅಪರಾಧಗಳು ವರದಿಯಾಗುತ್ತದೆ. ಕೆಲವು ವರ್ಷಗಳಿಂದ ನಮ್ಮ ರಾಷ್ಟ್ರದ ಜಾತ್ಯತೀತ ಸ್ವರೂಪವು ಬಾರಿ ಪ್ರಮಾಣದಲ್ಲಿ ಕೋಮುವಾದದೊಂದಿಗೆ ರಾಜಿಯಾಗಿದೆ. ಜನರ ಮನಸ್ಸಿನಲ್ಲಿ ಕೋಮುವಿಷ ತುಂಬುಲಾಗುತ್ತಿದೆ, ನಮ್ಮ ರಾಜ್ಯದ ಜಾತ್ಯಾತೀತ ಪರಂಪರೆಗೆ ಸಮಸ್ಯೆಯಾಗಿರುವ ರಾಜ್ಯದ ಜಾತ್ಯತೀತ ವಿರೋಧಿ ಶಕ್ತಿಗಳು, ನೈತಿಕ ಪೊಲೀಸ್ ಗಿರಿ, ವ್ಯಾಪಾರ ಬಹಿಷ್ಕಾರಕ್ಕೆ ಕರೆ ನೀಡುವ ಮೂಲಕ ದ್ವೇಷವನ್ನು ಹರಡುವ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದೆ. ಇದರ ವಿರುದ್ಧವಾಗಿ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ವಿವಿಧ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ “ಒಡೆಯೋಣ, ನಮ್ಮ ನಡುವಿನ ಗೋಡೆಯನ್ನು” ಎಂಬ ಧ್ಯೇಯವಾಕ್ಯದೊಂದಿಗೆ ಸಂಚರಿಸುವ ರಥಯಾತ್ರೆಯನ್ನು ನಾವು ಹಮ್ಮಿಕೊಂಡಿದ್ದೇವೆ. ರಥಯಾತ್ರೆಯು ಡಿಸೆಂಬರ್ 21 ರಿಂದ 24 ರವರೆಗೆ ಸಂಚರಿಸಲಿದೆ. ರಥಯಾತ್ರೆಯಲ್ಲಿ ಈ ವಿಷಯದ ಮೇಲೆ ಬೀದಿ ನಾಟಕಗಳನ್ನು ಪ್ರದರ್ಶಿಸಲಿದೆ. ವಿಭಜಕ ಶಕ್ತಿಗಳು ಏನೇ ಮಾಡಲಿ, ತುದಿಗಾಲಲ್ಲಿ ನಿಂತರು ನೈತಿಕ ಮೌಲ್ಯಗಳು ಉತ್ತುಂಗದಲ್ಲಿರುವ ಜಾತ್ಯಾತೀತ ಸಮಾಜವಾಗಿ ನಾವು ಯಾವಾಗಲೂ ಜಯಿಸುತ್ತೇವೆ ಎಂದು ಸಾರ್ವಜನಿಕರಿಗೆ ಅರಿವು ಮೂಡಿಸುತ್ತೇವೆ. ದ್ವೇಷದ ವಿನಾಶಕಾರಿ ಪರಿಣಾಮವು ದುಃಖಕರವಾಗಿದೆ ಅದರಲ್ಲಿ ಹೊಸತೇನಿಲ್ಲ. ಅದರ ಪ್ರಮಾಣ ಮತ್ತು ಪ್ರಭಾವವು ಇಂದು ಸಾಮಾಜಿಕ ಮಾಧ್ಯಮದಿಂದ ಹೆಚ್ಚಾಗಿದೆ. ಎಷ್ಟರಮಟ್ಟಿಗೆ ಎಂದರೆ ಜಾಗತಿಕ ಮಟ್ಟದಲ್ಲಿ ದ್ವೇಷ ಭಾಷಣದ ವಾಕ್ಚಾತುರ್ಯ ವಿಭಜಕ ಸಿದ್ದಾಂತಗಳನ್ನು ಹರಡುವ ಒಂದು ಸಾಮಾನ್ಯ ವಿಧಾನವಾಗಿದೆ. ಇದನ್ನು ನಿಯಂತ್ರಿಸದೆ ಬಿಟ್ಟರೆ ದ್ವೇಷದ ಭಾಷಣವು ದೇಶದ ಶಾಂತಿ ಮತ್ತು ಅಭಿವೃದ್ಧಿಗೆ ಹಾನಿಯುಂಟು ಮಾಡುತ್ತದೆ ಏಕೆಂದರೆ ಇದು ಸಂಘರ್ಷಗಳನ್ನು ಮತ್ತು ವ್ಯಾಪಕ ಪ್ರಮಾಣದ ಮಾನವ ಹಕ್ಕುಗಳ ಉಲ್ಲಂಘನೆಗಳಿಗೆ ಪ್ರೋತ್ಸಾಹವನ್ನು ನೀಡುತ್ತದೆ. ದ್ವೇಷದ ಭಾಷಣವು ಸಹಿಷ್ಣುತೆ ವೈವಿಧ್ಯತೆ ಮತ್ತು ಮಾನವ ಹಕ್ಕುಗಳ ನಿಯಮಗಳ ಮತ್ತು ತತ್ವಗಳ ಮೂಲತತ್ವದ ಮೌಲ್ಯಗಳ ನಿರಾಕರಣೆಯಾಗಿದೆ. ಇದು ತಾರತಮ್ಯ ರಾಷ್ಟ್ರದ ಶಕ್ತಿ ಎಂಬುದನ್ನು ಅರ್ಥಮಾಡಿಕೊಳ್ಳುವುದು ಬಹಳ ಅಗತ್ಯ ನಾವು ನಮ್ಮ ವೈವಿಧ್ಯಗಳನ್ನು ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದೆ.

ಸುದ್ದಿಗೋಷ್ಠಿಯಲ್ಲಿ ಎಸ್ ಐಒ ದ.ಕ. ಜಿಲ್ಲಾಧ್ಯಕ್ಷ ಮುಹಮ್ಮದ್ ಆಸಿಫ್ ಡಿ.ಕೆ., ಎಸ್ ಐಒ ದ.ಕ. ಜಿಲ್ಲಾ ಕಾರ್ಯದರ್ಶಿ ಮುಹಮ್ಮದ್ ಹಯ್ಯನ್, ಎಸ್ ಐಒ ದ.ಕ. ಜಿಲ್ಲಾ ಕಾರ್ಯದರ್ಶಿ ಮುಸ್ತಫಾ, ಸಹ ಸಂಚಾಲಕ ಶಾಹಿಲ್ ಉಪಸ್ಥಿತರಿದ್ದರು.



Join Whatsapp