ಯಾರನ್ನೂ ಇನ್ವೈಟ್ ಮಾಡಿಲ್ಲ.. ಇದು ನನ್ನೊಬ್ಬಳದ್ದೇ ಪ್ರೊಟೆಸ್ಟ್: ದಾವಣಗೆರೆಯಲ್ಲಿ ಒಂಟಿ ಮಹಿಳೆಯ ಘರ್ಜನೆ !

Prasthutha|

ದಾವಣಗೆರೆ: ನ್ಯಾಯಾಲಯವೇ ಆದರೂ ಸರಿ, ಅನ್ಯಾಯ ಎಲ್ಲಿಂದ ಆದರೂ ನ್ಯಾಯ ಪ್ರಜ್ಞೆಯೆಂಬುದು ನಮ್ಮೊಳಗಿದ್ದರೆ ನಾನು ಒಂಟಿಯಾಗಿದ್ದರೂ ಸರಿ ಅನ್ಯಾಯದ ವಿರುದ್ಧ ಪ್ರತಿಭಟಿಸಿಯೇ ಸಿದ್ಧ ಎನ್ನುವುದಕ್ಕೆ ದಾವಣಗೆರೆಯಲ್ಲಿ ಮಹಿಳೆಯೊಬ್ಬರು ಮಗುವನ್ನೆತ್ತಿಕೊಂಡು ಒಂಟಿಯಾಗಿ ಪ್ರತಿಭಟನೆ ನಡೆಸಿ, ರಾಜ್ಯದ ಗಮನ ಸೆಳೆದಿದ್ದಾರೆ. ಹಿಜಾಬ್ ತೀರ್ಪು ವಿರೋಧಿಸಿ ಕರ್ನಾಟಕ ಅಮೀರೇ ಶರೀಅತ್ ಕರೆ ನೀಡಿರುವ ಕರ್ನಾಟಕ ಬಂದ್ ಗೆ ರಾಜ್ಯ ಮೂಲೆ ಮೂಲೆಗಳಲ್ಲೂ ಬೆಂಬಲ ವ್ಯಕ್ತವಾಗಿದ್ದು, ದಾವಣಗೆರೆಯ ಮಹಿಳೆಯ ಏಕಾಂಗಿ ಹೋರಾಟದ ವೀಡಿಯೋ ವೈರಲ್ ಆಗಿದೆ

- Advertisement -

ದಾವಣಗೆರೆಯಲ್ಲಿ ಒಬ್ಬಂಟಿಯಾಗಿ ಜಾಸ್ಮೀನ್ ಬಾನು ಎನ್ನುವ ಮಹಿಳೆಯೋರ್ವಳು ಮಗುವನ್ನೆತ್ತಿ ಪ್ರತಿಭಟನೆ ನಡೆಸಿದ್ದು, ಜನರ ಗಮನವನ್ನ ಸೆಳೆಯಿತು. ಸಹಜವಾಗಿಯೆ ಜನ ಜಮಾಯಿಸುತ್ತಿದ್ದಂತೆ ಪೊಲೀಸರು ಆಗಮಿಸಿದ್ದಾರೆ. 144 ಸೆಕ್ಷನ್ ಬಗ್ಗೆ ಮಾಹಿತಿ ನೀಡಿ, ಪ್ರತಿಭಟನೆ ನಡೆಸಲು ಅವಕಾಶವಿಲ್ಲ ಎಂದಿದ್ದಾರೆ.‌ ನಾನು ಸಿಂಗಲ್ ಪರ್ಸನ್ ಆಗಿ ಪ್ರೊಟೆಸ್ಟ್ ಮಾಡಬಾರದು ಅಂತ ಎಲ್ಲಿದೆ ಅಂತಾ ಪೊಲೀಸರನ್ನು ಜಾಸ್ಮೀನ್ ಪ್ರಶ್ನಿಸಿದ್ದಾರೆ.

ನಿಮ್ಮ ಪ್ರತಿಭಟನೆಗೆ ಜನ ಜಮಾಯಿಸಿದರೆ ಅದಕ್ಕೆ ಕಾರಣ ನೀವೇ ಆಗುತ್ತೀರಿ ಎಂದು ಪೊಲೀಸರು ಎಚ್ಚರಿಸಿದ್ದಾರೆ. ತಕ್ಷಣವೇ ನನಗೆ ಯಾರೂ ಬೇಕಿಲ್ಲ.. ನಾನು ಯಾರನ್ನೂ ಕರೆದಿಲ್ಲ.. ಇದು ನನ್ನ ಸಿಂಗಲ್ ಪರ್ಸನ್ ಪ್ರೊಟೆಸ್ಟ್ ಎಂದು ಜಾಸ್ಮೀನ್ ಪೊಲೀಸರಿಗೆ ತಿರುಗೇಟು ನೀಡಿದ್ದಾರೆ.  ಮಾತ್ರವಲ್ಲದೇ ನೆರೆದಿದ್ದವರ ಕುರಿತು ಜಾಸ್ಮೀನ್ ಬಾನು, ಹೋಗ್ರಪ್ಪ ನಿಮ್ಮ ಕೆಲಸ ನೋಡಿಕೊಳ್ಳಿ ಎಂದು ವಾಪಸು ಕಳುಹಿಸಿದ್ದಾರೆ, ಇಷ್ಟಾಗುತ್ತಲೇ ಪೊಲೀಸರು ಸೈಲೆಂಟಾಗಿ ಹಿಂದಿರುಗಿದ್ದಾರೆ. ಹೋರಾಟದ ಕಿಚ್ಚು ಪ್ರತಿ ಮಹಿಳೆಯಲ್ಲೂ ಬೆಳೆಯುತ್ತಿದೆ ಎಂಬುದಕ್ಕೆ ಇದು ಉತ್ತಮ ನಿದರ್ಶನ ಎಂಬ ಮಾತುಗಳು ಕೇಳಿಬಂತು.



Join Whatsapp