’ಪದ್ಮಶ್ರೀ’ ನಿರಾಕರಿಸಿದ್ದ ಖ್ಯಾತ ಗಾಯಕಿ ಸಂಧ್ಯಾ ಮುಖರ್ಜಿ ಹೃದಯಾಘಾತದಿಂದ ನಿಧನ

Prasthutha|

- Advertisement -

ಕೋಲ್ಕತ್ತಾ: ‘ಪದ್ಮಶ್ರೀ’ ಪ್ರಶಸ್ತಿಯನ್ನು ನಿರಾಕರಿಸಿದ್ದ ಪಶ್ಚಿಮ ಬಂಗಾಳದ ಖ್ಯಾತ ಗಾಯಕಿ ಸಂಧ್ಯಾ ಮುಖರ್ಜಿ ಹೃದಯಾಘಾತದಿಂದ ನಿಧನರಾದರು.

ಅವರಿಗೆ 90 ವರ್ಷ ವಯಸ್ಸಾಗಿತ್ತು. ಹಲವು ದಿನಗಳಿಂದ ಸಂದ್ಯಾ ಮುಖರ್ಜಿ ಅನಾರೋಗ್ಯದಿಂದ ಬಳಲುತ್ತಿದ್ದರು. ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು.

- Advertisement -

ಮುಖರ್ಜಿ ಅವರು ಭಾರತೀಯ ಸಿನಿಮಾದ ಸಾವಿರಾರು ಹಾಡುಗಳಿಗೆ ದನಿಯಾಗಿದ್ದು, ಹಲವು ಆಲ್ಬಮ್ಗಳನ್ನು ಹೊರತಂದಿದ್ದರು. ಅತ್ಯುತ್ತಮ ಹಿನ್ನೆಲೆ ಗಾಯನಕ್ಕಾಗಿ 1970ರಲ್ಲೇ ಅವರು ರಾಷ್ಟ್ರ ಪ್ರಶಸ್ತಿಯನ್ನು ಪಡೆದಿದ್ದರು.

ಇತ್ತೀಚೆಗೆ ಕೇಂದ್ರ ಸರ್ಕಾರ ಸಂದ್ಯಾ ಮುಖರ್ಜಿಗೆ ದೇಶದಲ್ಲೇ ನಾಲ್ಕನೇಯ ಅತೀ ದೊಡ್ಡ ನಾಗರಿಕ ಪ್ರಶಸ್ತಿಯಾದ ’ಪದ್ಮಶ್ರೀ’ ಯನ್ನು ಘೋಷಣೆ ಮಾಡಿತ್ತು. ಆದರೆ ಆ ಪ್ರಶಸ್ತಿಯನ್ನು ಸಂದ್ಯಾ ಮುಖರ್ಜಿ ನಿರಾಕರಿಸಿದ್ದರು.



Join Whatsapp