ಇಂಡೋನೇಷ್ಯಾ ಮಾಸ್ಟರ್ಸ್ ಬ್ಯಾಡ್ಮಿಂಟನ್: ಸೆಮಿಫೈನಲ್’ನಲ್ಲಿ ಮುಗ್ಗರಿಸಿದ ಸಿಂಧು, ಶ್ರೀಕಾಂತ್

Prasthutha|

ಇಂಡೋನೇಷ್ಯಾ: ಇಂಡೋನೇಷ್ಯಾ ಮಾಸ್ಟರ್ಸ್ ಬ್ಯಾಡ್ಮಿಂಟನ್‌ ಪಂದ್ಯಾವಳಿಯಲ್ಲಿ ಭಾರತದ ಅಭಿಯಾನ ಸೆಮಿಫೈನಲ್’ನಲ್ಲಿ ಅಂತ್ಯವಾಗಿದೆ. ಭಾರತದ ಸ್ಟಾರ್ ಆಟಗಾರರಾದ ಪಿ.ವಿ. ಸಿಂಧು, ಹಾಗೂ ಪುರುಷರ ವಿಭಾಗದಲ್ಲಿ ಕೆ. ಶ್ರೀಕಾಂತ್‌ ಸೆಮಿಫೈನಲ್‌ನಲ್ಲಿ ಸೋತು ಕೂಟದಿಂದ ನಿರ್ಗಮಿಸಿದ್ದಾರೆ.

- Advertisement -

ಶನಿವಾರ ನಡೆದ ಮಹಿಳಾ ಸಿಂಗಲ್ಸ್‌ ಸೆಮಿಫೈನಲ್‌ ಪಂದ್ಯದಲ್ಲಿ  ಎರಡು ಬಾರಿಯ ಒಲಿಂಪಿಕ್ಸ್ ಪದಕ ವಿಜೇತೆ ಪಿವಿ ಸಿಂಧು ಅಗ್ರಶ್ರೇಯಾಂಕಿತ ಆಟಗಾರ್ತಿ ಜಪಾನಿನ ಅಕಾನೆ ಯಮಾಗುಚಿಗೆ ಸುಲಭದಲ್ಲಿ ಶರಣಾದರು. ಕೇವಲ 32 ನಿಮಿಷದಲ್ಲಿ ಮುಗಿದ ಏಪಕಪಕ್ಷೀಯ ಪಂದ್ಯದಲ್ಲಿ ಯಮಾಗುಚಿ 21-13, 21-9 ಅಂತರದಿಂದ ಸಿಂಧುಗೆ ಸೋಲಿನ ಕಹಿಯುಣಿಸಿದರು.

ವೃತ್ತಿ ಜೀವನದಲ್ಲಿ ಯಮಗುಚಿ ವಿರುದ್ಧ 12-7 ಅಂತರದ ಗೆಲುವಿನ ದಾಖಲೆ ಹೊಂದಿದ್ದ ಸಿಂಧು, ಇಂದಿನ ಪಂದ್ಯದಲ್ಲೂ ಗೆಲ್ಲುವ ಫೇವರಿಟ್ ಆಟಗಾರ್ತಿಯಾಗಿದ್ದರು. ಈ ವರ್ಷ ಇವರಿಬ್ಬರು ಎರಡು ಬಾರಿ ಪರಸ್ಪರ ಮುಖಾಮುಖಿಯಾಗಿದ್ದ ವೇಳೆ ಯಮಾಗುಚಿಗೆ ಸಿಂಧು ಸೋಲುಣಿಸಿದ್ದರು. ಆದರೆ ಮೂರನೇ ಪಂದ್ಯದಲ್ಲಿ ಸೇಡು ತೀರಿಸಿಕೊಂಡ ಜಪಾನ್;ನ ಆಟಗಾರ್ತಿ ಫೈನಲ್ ಟಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು.

- Advertisement -

ಮಹಿಳೆಯರ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಟರ್ಕಿಯ ಶ್ರೇಯಾಂಕ ರಹಿತ ಆಟಗಾರ್ತಿ ನೆಸ್ಲಹಾನ್ ಯುಗಿಟ್ ವಿರುದ್ಧ 21-13, 21-10, ಅಂತರದಲ್ಲಿ ಸಿಂಧು ನೇರ ಸೆಟ್’ಗಳ ಗೆಲುವು ಸಾಧಿಸಿ ಸೆಮಿಫೈನಲ್ ಪ್ರವೇಶಿಸಿದ್ದರು.  

ಶ್ರೀಕಾಂತ್‌ ನಿರ್ಗಮನ: ಇನ್ನೊಂದೆಡೆ ಪುರುಷರ ಸಿಂಗಲ್ಸ್’ನ ಸೆಮಿಫೈನಲ್’ನಲ್ಲೂ ಭಾರತಕ್ಕೆ ನಿರಾಸೆ ಕಾದಿತ್ತು. ಡೆನ್ಮಾರ್ಕ್‌ನ 3ನೇ ಶ್ರೇಯಾಂಕಿತ ಆಟಗಾರ ಆ್ಯಂಡ್ರೆಸ್‌ ಅಂಟೋನ್ಸೆನ್‌ ವಿರುದ್ಧ ಶ್ರೀಕಾಂತ್‌ 21-14, 21-9 ಅಂತರದಿಂದ ನೇರ ಸೆಟ್’ಗಳಲ್ಲಿ ಪರಾಭವಗೊಂಡರು. ಕ್ವಾರ್ಟರ್‌ ಫೈನಲ್‌ನಲ್ಲಿ ಎಚ್‌.ಎಸ್‌. ಪ್ರಣಯ್‌ ವಿರುದ್ಧ ಗೆಲುವ ಸಾಧಿಸಿದ್ದ ಶ್ರೀಕಾಂತ್‌ ಸೆಮಿಫೈನಲ್ ಪ್ರವೇಶಿಸಿದ್ದರು. 

Join Whatsapp