ಮಂಜನಾಡಿ: ಮಅದನುಲ್ ಉಲೂಂ ಮದ್ರಸ ಮಂಗಳಾಂತಿ ಇದರ ವಿದ್ಯಾರ್ಥಿ ಸಂಘಟನೆಯಾದ ಎಸ್. ಬಿ.ಎಸ್.ನ ನೂತನ ಸಮಿತಿಯ ಅಧ್ಯಕ್ಷರಾಗಿ ಸಿನಾನ್ ಆಯ್ಕೆಯಾಗಿದ್ದಾರೆ.
ಪದಾಧಿಕಾರಿಗಳ ಆಯ್ಕೆ ಸಭೆಯಲ್ಲಿ ಮದ್ರಸದ ಸದರ್ ಅಧ್ಯಾಪಕರಾದ ಮುಹಮ್ಮದ್ ಸಯೀದ್ ಸಅದಿ ಅಲ್ ಅಫ್ಲಲಿ ಸೆರ್ಕಳ ಅಧ್ಯಕ್ಷತೆ ವಹಿಸಿ ಪ್ರಾರ್ಥನೆಗೆ ನೇತೃತ್ವ ನೀಡಿದರು.
ಅಧ್ಯಕ್ಷ ಭಾಷಣಗೈದ ಮುಹಮ್ಮದ್ ಸಯೀದ್ ಸಅದಿ ಅಲ್ ಅಫ್ಲಲಿ ಸೆರ್ಕಳ, ವಿದ್ಯಾರ್ಥಿ ಸಮೂಹವು ಧಾರ್ಮಿಕ-ಲೌಕಿಕ ಜ್ಞಾನವನ್ನು ಮೈಗೂಡಿಸಿಕೊಂಡು ಆಧುನಿಕತೆಯಿಂದ ಮೈಮರೆತ ಯುವ ಪೀಳಿಗೆಗೆ ಮಾದರಿಯಾಗಬೇಕೆಂದೂ, ಪವಿತ್ರ ಇಸ್ಲಾಮಿನ ಶಾಂತಿ ಸೌಹಾರ್ದತೆಯನ್ನು ತಮ್ಮ ಜೀವನದ ಮೂಲಕ ಸಮಾಜಕ್ಕೆ ತೋರಿಸಿ ಕೊಡಬೇಕೆಂದೂ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಅಧ್ಯಾಪಕರಾದ ಸಿದ್ದಿಖ್ ಅಹ್ಸನಿ ಅಸೈ ಕಾರ್ಯಕ್ರಮವನ್ನು ಉದ್ಘಾಟಿಸಿದರು. ನಿಝಾರ್ ಸಖಾಫಿ ಕಲ್ಕಟ್ಟ ಹಾಗೂ ಫಾರೂಕ್ ಹಿಮಮಿ ಕಿನ್ಯಾ ಕಾರ್ಯಕ್ರಮದಲ್ಲಿ ಶುಭಕೋರಿದರು.
ನಂತರ ನೂತನ ಸಮಿತಿಯನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಸಿನಾನ್ ಉಪಾಧ್ಯಕ್ಷರಾಗಿ ಸವಾನ್, ಕಾರ್ಯದರ್ಶಿ ತಾಹಿರ್, ಜೊತೆ ಕಾರ್ಯದರ್ಶಿ ನಿಯಾಫ್ ಹಾಗೂ ಕೋಶಾಧಿಕಾರಿಯಾಗಿ ಬಶಾರತ್ ರನ್ನೂ ಕಾರ್ಯಕಾರಿ ಸದಸ್ಯರುಗಳಾಗಿ ಆದಿಲ್, ಶಹೀರ್, ಅಫ್ಲಲ್, ನಜಾಫ್, ಶಾಹಿನ್, ನಿಹಾಲ್, ಫಾಝಿಲ್, ಆಶಿಖ್ ಎಂಬವರನ್ನು ಆರಿಸಲಾಯಿತು.
ಏಳು ತಂಡಗಳಾಗಿ ನಡೆಯುವ ಸಾಹಿತ್ಯ ಸಮಾಜಕ್ಕೆ ಸಿನಾನ್, ತಾಹಿರ್, ನಿಯಾಫ್, ಆಝಿಲ್, ವಫಾ, ನುಹಾ ಹಾಗೂ ತೌಸಿಯಾರನ್ನು ನಾಯಕರನ್ನಾಗಿ ನೇಮಿಸಲಾಯಿತು. ಅಧ್ಯಾಪಕರಾದ ಇರ್ಷಾದ್ ರಝ್ವಿ ಸ್ವಾಗತಿಸಿ, ಸಿನಾನ್ ವಂದಿಸಿದರು.