ರೈತರ ಪ್ರತಿಭಟನೆ | ಮೋದಿ ಸರಕಾರದ ಅನ್ಯಾಯಕ್ಕೆ ಆಕ್ರೋಶ ವ್ಯಕ್ತಪಡಿಸಿ ಗುರುದ್ವಾರದ ಅರ್ಚಕ ಆತ್ಮಹತ್ಯೆ

Prasthutha|

ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಸರಕಾರದ ನೂತನ ಕೃಷಿ ನೀತಿಗಳನ್ನು ವಿರೋಧಿಸಿ ದೆಹಲಿ ಗಡಿಭಾಗಗಳಲ್ಲಿ ಕಳೆದ 22 ದಿನಗಳಿಂದ ಪ್ರತಿಭಟನೆ ನಿರತರಾಗಿರುವ ರೈತರ ಹೋರಾಟಕ್ಕೆ ಹೊಸ ತಿರುವುದ ಸಿಕ್ಕಿದೆ. ಹರ್ಯಾಣದ ಕರ್ನಲ್ ಮೂಲದ ಗುರುದ್ವಾರವೊಂದರ ಅರ್ಚಕರೊಬ್ಬರು ಪ್ರತಿಭಟನೆಯನ್ನು ಬೆಂಬಲಿಸಿ, ಸರಕಾರದ ನೀತಿಯನ್ನು ಖಂಡಿಸಿ, ಆತ್ಮಹತ್ಯೆಗೆ ಶರಣಾಗಿರುವುದು ಆಘಾತಕ್ಕೆ ಕಾರಣವಾಗಿದೆ.

- Advertisement -

ಗುರುದ್ವಾರದ ಅರ್ಚಕ 65ರ ಹರೆಯದ ಬಾಬಾ ರಾಮ್ ಸಿಂಗ್ ದೆಹಲಿ-ಸೋನಿಪತ್ ಗಡಿಯ ಕುಂಡ್ಲಿಗೆ ಮಂಗಳವಾರ ಸಂಜೆ ತಲುಪಿದ್ದಾರೆ. ಅಲ್ಲಿ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

“ಸರಕಾರದ ಅನ್ಯಾಯಕ್ಕೆ ಆಕ್ರೋಶ ಮತ್ತು ನೋವಿನಿಂದ” ತಮ್ಮ ಪ್ರಾಣವನ್ನು ಬಲಿದಾನ ನೀಡುತ್ತಿದ್ದೇನೆ ಎಂದು ಬಾಬಾ ರಾಮ್ ಸಿಂಗ್ ತಮ್ಮ ಆತ್ಮಹತ್ಯಾ ಪತ್ರದಲ್ಲಿ ತಿಳಿಸಿದ್ದಾರೆ.

- Advertisement -

“ರೈತರು ತಮ್ಮ ಹಕ್ಕುಗಳನ್ನು ದೃಢಪಡಿಸಲು ಹೋರಾಡುತ್ತಿರುವುದಕ್ಕೆ ನನಗೆ ನೋವಾಗಿದೆ. ಸರಕಾರ ಅವರಿಗೆ ನ್ಯಾಯ ನೀಡುತ್ತಿಲ್ಲ ಎಂಬುದರ ಬಗ್ಗೆ ನಾನು ನನ್ನ ನೋವನ್ನು ಹಂಚಿಕೊಳ್ಳುತ್ತಿದ್ದೇನೆ. ಅನ್ಯಾಯ ಮಾಡುವುದು ಪಾಪ, ಅಲ್ಲದೆ, ಅನ್ಯಾಯವನ್ನು ಸಹಿಸಿಕೊಳ್ಳುವುದೂ ಮಹಾಪಾಪ. ರೈತರನ್ನು ಬೆಂಬಲಿಸಲು ಕೆಲವರು ಸರಕಾರಕ್ಕೆ ತಮ್ಮ ಪ್ರಶಸ್ತಿಗಳನ್ನು ಹಿಂದಿರುಗಿಸಿದ್ದಾರೆ. ನಾನು ನನ್ನನ್ನು ಬಲಿದಾನ ನೀಡಲು ನಿರ್ಧರಿಸಿದ್ದೇನೆ” ಎಂದು ಡೆತ್ ನೋಟ್ ನಲ್ಲಿ ಬಾಬಾ ರಾಮ್ ಸಿಂಗ್ ಹೇಳಿದ್ದಾರೆ.

ಬಾಬಾ ರಾಮ್ ಸಿಂಗ್ ಕಾರೊಂದರಲ್ಲಿ ತಮಗೆ ತಾವೇ ಗುಂಡಿಕ್ಕಿಕೊಂಡು ಸಾವಿಗೀಡಾಗಿದ್ದಾರೆ. ತಕ್ಷಣವೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಅಷ್ಟರಲ್ಲಿ ಅವರು ಕೊನೆಯುಸಿರೆಳೆದಿದ್ದಾರೆ. ಶುಕ್ರವಾರ ಅವರ ಅಂತ್ಯ ಸಂಸ್ಕಾರ ನಡೆಯಲಿದೆ ಎಂದು ಅವರ ಬೆಂಬಲಿಗರು ತಿಳಿಸಿದ್ದಾರೆ.   

Join Whatsapp