ಕರವೇಯಿಂದ ಸಿಎಂ ಸಿದ್ದರಾಮಯ್ಯ ನಿವಾಸಕ್ಕೆ ಮುತ್ತಿಗೆ: ಅಧ್ಯಕ್ಷ ಟಿಎ ನಾರಾಯಣಗೌಡ

Prasthutha|

ಬೆಂಗಳೂರು: ಬೆಂಗಳೂರು ಬಂದ್​ಗೆ ದಿಢೀರ್ ಕರೆ ನೀಡಿರುವುದು ಸರಿಯಲ್ಲ. ಬಂದ್​ಗೆ ಸಂಬಂಧಿಸಿದ ಚಟುವಟಿಕೆಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಭಾಗಿಯಾಗಲ್ಲ. ಸೆ.26ರಂದು ಬೆಳಗ್ಗೆ 10ಕ್ಕೆ ಸಿಎಂ ಸಿದ್ದರಾಮಯ್ಯ ಕಚೇರಿ, ನಿವಾಸಕ್ಕೆ ಮುತ್ತಿಗೆ ಹಾಕುತ್ತೇವೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಟಿ.ಎ.ನಾರಾಯಣಗೌಡ ಹೇಳಿದ್ದಾರೆ.

- Advertisement -

 ಗಾಂಧಿನಗರದಲ್ಲಿರುವ ಕರ್ನಾಟಕ ರಕ್ಷಣೆ ವೇದಿಕೆ ಕಚೇರಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಳೆ ಕರೆ ನೀಡಿರುವ ಬೆಂಗಳೂರು ಬಂದ್​ಗೆ ಕರವೇ ಬೆಂಬಲವಿಲ್ಲ. ಆದರೆ ನಾಳೆ ಪ್ರತ್ಯೇಕ ಪ್ರತಿಭಟನಾ ಮೆರವಣಿಗೆ ಮಾಡಲಾಗುವುದು ಎಂದು ಹೇಳಿದ್ದಾರೆ.

ತಮಿಳುನಾಡಿಗೆ ನೀರು ಹರಿಸುವುದನ್ನು ನಿಲ್ಲಿಸುವ ತನಕ ಹೋರಾಟ ಮುಂದುವರಿಯುತ್ತೆ. ಸೆ.29ರಂದು ಕರೆ ನೀಡಿರುವ ಕರ್ನಾಟಕ ಬಂದ್​ಗೂ ನಮ್ಮ ಬೆಂಬಲವಿಲ್ಲ. ನಾವು ಪ್ರತಿಭಟನೆ ಮಾಡುತ್ತೇವೆಯೇ ಹೊರತು ಬಂದ್​ನಲ್ಲಿ ಭಾಗವಹಿಸಲ್ಲ. ಯಾವುದೇ ಹೋರಾಟಗಾರರ ಬಗ್ಗೆ ನಾನು ಲಘುವಾಗಿ ಮಾತನಾಡಲ್ಲ ಎಂದರು.

Join Whatsapp