ಬೆಂಗಳೂರು: ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಪಿ ಮುಹಮ್ಮದ್ ಅವರ ಕಾರ್ಟೂನ್ ಒಂದನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುವ ಮೂಲಕ ಜನರಿಂದ ಗದ್ದುಗೆ ಏರಿದವರು ಜನಪರ ಆಡಳಿತ ನಡೆಸದಿದ್ದರೆ ಜನರಿಂದಲೇ ಭಾರೀ ವಿರೋಧ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಸಿದ್ದರಾಮಯ್ಯ ಅವರು ಹಂಚಿಕೊಂಡ ಕಾರ್ಟೂನಿನ ಈ ಟ್ವೀಟ್ ಇದೀಗ ವೈರಲ್ ಆಗಿದ್ದು ಭಾವಚಿತ್ರದ ಚೌಕಟ್ಟನ್ನು ಖಾಲಿ ಬಿಟ್ಟಿರುವುದೇಕೆ, ಯಾರನ್ನು ಉದ್ದೇಶಿಸಿ ಅವರು ಟ್ವೀಟ್ ಮಾಡಿದ್ದಾರೆ ಎಂಬ ಚರ್ಚೆಯೂ ಶುರುವಾಗಿದೆ. ಪ್ರಧಾನಿ ಮೋದಿಯನ್ನೇ ಉದ್ದೇಶಿಸಿ ಈ ಟ್ವೀಟ್ ಮಾಡಿರಬಹುದು ಎಂದು ನೆಟ್ಟಿಗರು ಅಂದಾಜಿಸಿದ್ದಾರೆ.
ಈ ಊಹಾಪೋಹಾಗಳೇನಿರಲಿ, ಯಾವುದೇ ದೇಶವಾಗಲಿ ಅಲ್ಲಿನ ಸರ್ಕಾರಗಳು ಜನಪರವಾದ ರೀತಿಯಲ್ಲಿ ಆಡಳಿತ ನಡೆಸದಿದ್ದರೆ ಪ್ರಜೆಗಳಿಂದಲೇ ಭಾರಿ ವಿರೋಧ ಎದುರಿಸಬೇಕಾಗುತ್ತದೆ. ಅಧಿಕಾರ ಕಳೆದುಕೊಂಡು ಅಜ್ಞಾತರಾಗುವ ಪರಿಸ್ಥಿತಿ ಉಂಟಾಗುತ್ತದೆ ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.