ಪಂಜಾಬ್’ನಲ್ಲಿ ಗುಂಡಿನ ಚಕಮಕಿ

Prasthutha|

ಅಮೃತಸರ: ಪಂಜಾಬ್’ನ ಅಮೃತಸರದ ಬಳಿ ಸಿಧು ಮೂಸೆವಾಲಾ ಕೊಲೆ ಆರೋಪಿಗಳೆಂದು ಶಂಕಿಸಲಾದ ಇಬ್ಬರು ಮತ್ತು ಪೊಲೀಸರ ನಡುವೆ ಗುಂಡಿನ ಚಕಮಕಿ ನಡೆಯುತ್ತಿದೆ ಎಂದು ಮೂಲಗಳಿಂದ ತಿಳಿದು ಬಂದಿವೆ.

- Advertisement -

ಪಂಜಾಬ್’ನ ಭಕ್ನಾ ಗ್ರಾಮದಲ್ಲಿ ಪಂಜಾಬ್ ಪೊಲೀಸರ ರೌಡಿ ನಿಗ್ರಹದಳವು ಕುಖ್ಯಾತ ಗ್ಯಾಂಗ್ ಸ್ಟರ್ ಆದ ಜಗ್ರೂಪ್ ಸಿಂಗ್ ರೂಪ ಮತ್ತು ಮನ್’ಪ್ರೀತ್ ಸಿಂಗ್ ಅಲಿಯಾಸ್ ಮನ್ನು ಕುಸಾ ಎಂಬವರನ್ನು ಹಿಮ್ಮೆಟ್ಟಿಸಿದೆ ಎಂದು ಹೇಳಲಾಗಿದೆ.

ಸದ್ಯ ಗುಂಡಿನ ದಾಳಿಗೊಳಗಾದ ಪ್ರದೇಶವನ್ನು ಪೊಲೀಸರು ಸುತ್ತುವರಿದಿದ್ದು, ಜನರು ಮನೆಯೊಳಗೆ ಇರುವಂತೆ ಆದೇಶ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.

- Advertisement -

ಮೇ 29 ರಂದು ಪಂಜಾಬ್’ನ ಮಾನ್ಸಾ ಜಿಲ್ಲೆಯಲ್ಲಿ ಸಿಧು ಮೂಸೆವಾಲಾ ಅವರನ್ನು ಗುಂಡಿಕ್ಕಿ ಹತ್ಯೆ ನಡೆಸಲಾಗಿತ್ತು. ಘಟನೆಗೆ ಸಂಬಂಧಿಸಿದಂತೆ ಹಲವರನ್ನು ಬಂಧಿಸಿದ್ದು, ಇಬ್ಬರು ಪರಾರಿಯಾಗಿದ್ದರು.

Join Whatsapp